ಗಾಂಧಿನಗರ: ಈ ಹಿಂದೆ ಕೆಲವು ಜಾಗೃತ ನಾಗರಿಕರು ಮತ್ತು ಮಧ್ಯವರ್ತಿಗಳು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದರು. ಆದರೆ, ಈಗ ಸರ್ಕಾರ ಅಂತಹ ಪ್ರಯೋಜನಗಳನ್ನು ಅರ್ಹ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಾಂಧಿನಗರದಲ್ಲಿ PMJAY-MA(ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ” ಮಾ ಅಮೃತಂ) ಯೋಜನೆ ಕಾರ್ಡ್‌ಗಳನ್ನು ವಿತರಿಸುವ ಸಮಾರಂಭದಲ್ಲಿ ತಮ್ಮ ವಾಸ್ತವ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಅಗತ್ಯವನ್ನು ಒತ್ತಿ ಹೇಳಿದರಲ್ಲದೇ, ಅಪೌಷ್ಟಿಕತೆಯ ವಿರುದ್ಧ ಹೋರಾಡುವುದು ಮುಖ್ಯ. ಮಗು ಆರೋಗ್ಯವಾಗಿದ್ದರೆ ದೇಶವು ಆರೋಗ್ಯಕರವಾಗಿರುತ್ತದೆ ಎಂದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ದೊಡ್ಡ ಸಮಾವೇಶ ಕೇಂದ್ರದಲ್ಲಿ ಸೇರಿ ಯೋಜನೆ ಘೋಷಣೆ ಮಾಡಿ, ದೀಪ ಬೆಳಗಿಸಿ, ಮುಖಂಡರು ಒಳ್ಳೆ ಉಪನ್ಯಾಸ ನೀಡುತ್ತಿದ್ದರು ಅಷ್ಟೆ. ಬಳಿಕ ಕೆಲ ಜಾಗೃತ ನಾಗರಿಕರು, ಮಧ್ಯವರ್ತಿಗಳು ಮಾತ್ರ ಇದರ ಲಾಭ ಪಡೆಯುತ್ತಿದ್ದರು. ಯೋಜನೆಗಳು. ಪ್ರಯೋಜನಗಳು ಅಗತ್ಯವಿರುವ ಜನರಿಗೆ ತಲುಪುತ್ತಿರಲಿಲ್ಲ. ತಮ್ಮ ಸರ್ಕಾರ ಈ ಪದ್ಧತಿಯನ್ನು ಬದಲಾಯಿಸಿದೆ. ಈಗ ಸರ್ಕಾರ ಪ್ರತಿ ಮನೆಗೆ ತೆರಳಿ ಫಲಾನುಭವಿಗಳನ್ನು ಗುರುತಿಸಿ ಅರ್ಹರಿಗೆ ಯೋಜನೆಯ ಲಾಭವನ್ನು ನೀಡುತ್ತಿದೆ ಎಂದರು.