ರಾಜ್ಯದಲ್ಲಿ ಚುನಾವಣಾ ಕಾವಿನ ನಡುವೆ ಅಕ್ರಮಗಳ ಪತ್ತೆಯೂ ಜೋರಾಗಿದೆ. ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾದಾಗಿನಿಂದ ಚುನಾವಣಾ ಅಧಿಕಾರಿಗಳು 200 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
10 ಲಕ್ಷ ಲೀಟರ್‌ಗೂ ಹೆಚ್ಚು ಮದ್ಯ ಸೇರಿದಂತೆ ಒಟ್ಟು 204 ಕೋಟಿ ರೂಪಾಯಿ ಮೊತ್ತವನ್ನ ಜಾರಿ ಸಂಸ್ಥೆಗಳು ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ.
ಒಟ್ಟು 204 ಕೋಟಿ ರೂಪಾಯಿಯಲ್ಲಿ 77 ಕೋಟಿ ರೂಪಾಯಿ ನಗದು, 43 ಕೋಟಿ ರೂಪಾಯಿ ಮೌಲ್ಯದ ಮದ್ಯ, 50 ಕೋಟಿ ರೂಪಾಯಿ ಮೌಲ್ಯದ ಚಿನ್ನ- ಬೆಳ್ಳಿ, 20 ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ವಸ್ತುಗಳು, 15 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್/ಮಾದಕ ವಸ್ತುಗಳು ಸೇರಿವೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,629 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.