ಮುಖ್ರಾಯ್, ಮಥುರಾ ಜಿಲ್ಲೆಯ ಒಂದು ಗ್ರಾಮ. ಈ ಗ್ರಾಮದ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿನ ಮಹಿಳೆಯೊಬ್ಬಳು ಎಲ್ಲರಿಗೆ ಮಾದರಿಯಾಗಿದ್ದಾರೆ.
ಹಳ್ಳಿಯ ಸೀಮಾದೇವಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸೀಮಾ ದೇವಿ, ಎಲ್ಲ ಮಹಿಳೆಯರಂತೆ, ಮನೆ ಕೆಲಸ ಮಾಡಿಕೊಂಡಿದ್ದರು. ಆದ್ರೀಗ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಸೀಮಾ, ಮನೆ ಕೆಲಸ ಮುಗಿದ ನಂತ್ರ ಎಲ್‌ಇಡಿ ಬಲ್ಬ್ ಗಳನ್ನು ತಯಾರಿಸುತ್ತಾರೆ. ಇದಲ್ಲದೇ ವಿದ್ಯುತ್ ಬಿಲ್ ವಸೂಲಿಯನ್ನೂ ಮಾಡುತ್ತಾರೆ.
ಸೀಮಾಳ ಪ್ರತಿಭೆ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಕಂಡ ಹಳ್ಳಿಯ ಇತರ ಹೆಣ್ಣುಮಕ್ಕಳು, ಅವರಿಂದ ಕೆಲಸ ಕಲಿಯುತ್ತಿದ್ದಾರೆ. ಸ್ವಸಹಾಯ ಸಂಘಕ್ಕೆ ಸೇರುವ ಮೂಲಕ ಸೀಮಾ, ಜೀವನದಲ್ಲಿ ಈ ಬದಲಾವಣೆಯಾಗಿದೆ. ಬ್ಲಾಕ್ ಅಧಿಕಾರಿಗಳಿಂದ ಸ್ವಸಹಾಯ ಸಂಘದ ಬಗ್ಗೆ ಮಾಹಿತಿ ಪಡೆದುಕೊಂಡ ಸೀಮಾ, ಕೆಲಸ ಕಲಿತರು.
ಮೊದಲು ಸೀಮಾ, ಮೀಟರ್ ಓದುವ ಕೆಲಸ ಕಲಿತರಂತೆ. ಎಲೆಕ್ಟ್ರಿಕ್ ಮೀಟರ್‌ಗಳಿಂದ ರೀಡಿಂಗ್ ತೆಗೆದುಕೊಳ್ಳುವುದು, ರೀಡಿಂಗ್ ರೆಕಾರ್ಡ್ ಮಾಡುವುದು ಮತ್ತು ಯಂತ್ರದಿಂದ ಬಿಲ್ ಡ್ರಾ ಮಾಡುವ ತರಬೇತಿಯನ್ನು ಪಡೆದರು. ಆರಂಭದಲ್ಲಿ ಭಯವಿತ್ತು. ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡದ ಕಾರಣ ಭಯವಾಗ್ತಿತ್ತು. ಆದ್ರೆ ಈಗ ಕೆಲಸ ಸುಲಭವಾಗಿದೆ ಎಂದಿದ್ದಾರೆ.
ಸೀಮಾ ಅವರು ಮನೆ ಮನೆಗೆ ಹೋಗಿ ವಿದ್ಯುತ್ ಮೀಟರ್‌ನಿಂದ ರೀಡಿಂಗ್ ತೆಗೆದುಕೊಳ್ಳುತ್ತಾರೆ. ನಂತರ ತಮ್ಮ ಬಿಲ್ ಸಿದ್ಧಪಡಿಸುತ್ತಾರೆ. ಬಿಲ್ ಪಾವತಿಸುತ್ತಾರೆ. ಫೋನ್ ಸಹಾಯದಿಂದ ಆನ್‌ಲೈನ್ ಮೂಲಕ ಪಾವತಿಸುತ್ತಾರೆ. ಒಂದು ಬಿಲ್ ನಲ್ಲಿ 20 ರೂಪಾಯಿ ಕಮಿಷನ್ ಪಡೆಯುತ್ತಾರೆ.
ಸೀಮಾ ಮೀಟರ್ ರೀಡಿಂಗ್‌ಗಾಗಿ ಮುಖರೈ ಸುತ್ತಮುತ್ತಲಿನ ಹಳ್ಳಿಗಳಿಗೂ ಭೇಟಿ ನೀಡುತ್ತಾರೆ. ಈ ರೀತಿಯಾಗಿ, ಅವರು ಪ್ರತಿ ತಿಂಗಳು ಸುಮಾರು 500 ಬಿಲ್‌ಗಳನ್ನು ಸಂಗ್ರಹಿಸುತ್ತಾರೆ.
ಇಷ್ಟೇ ಅಲ್ಲದೆ ಸೀಮಾ, ವಿದ್ಯುತ್ ಬಿಲ್ ಕಟ್ಟುವ ಕೆಲಸದಲ್ಲಿ ನಿಪುಣರಾದ ಮೇಲೆ, ಎಲ್ ಇಡಿ ಬಲ್ಬ್ ತಯಾರಿಕೆ ತರಬೇತಿ ಪಡೆದರು. ಸ್ವಸಹಾಯ ಸಂಘದಿಂದಲೇ ಸಾಲ ಪಡೆದು ಬಲ್ಬ್ ತಯಾರಿಸಲು ಅಗತ್ಯ ಪರಿಕರಗಳನ್ನು ಖರೀದಿಸಿದರು. ಸೀಮಾ ಒಬ್ಬರೇ ಸುಮಾರು 200 ಬಲ್ಬ್ ಗಳನ್ನು ಸ್ವಂತವಾಗಿ ತಯಾರಿಸುತ್ತಾರೆ. ಒಂದು ಬಲ್ಬ್ ನಲ್ಲಿ 40-50 ರೂಪಾಯಿಗಳನ್ನು ಸುಲಭವಾಗಿ ಉಳಿಸುತ್ತಾರೆ. ಇದಕ್ಕೆ ಇನ್ನಷ್ಟು ಒತ್ತು ನೀಡುವ ಆಲೋಚನೆ ಅವರಿಗಿದೆ.