ಲಖಿಸರಾಯ್: ಬಿಹಾರದ ಲಖಿಸರಾಯ್ ನಲ್ಲಿ ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಪ್ರಾಪ್ತನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ.
ಕೆಲಸಕ್ಕೆ ಹೊರಗೆ ಹೋಗಿದ್ದ ಮಹಿಳೆಯ ಪತಿ ತಿಂಗಳಿನಿಂದ ಮನೆಗೆ ಬಂದಿರಲಿಲ್ಲ. ಈ ನಡುವೆ ಆತನ ಪತ್ನಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮನೆಗೆ ಬಂದ ಪತಿ ತನ್ನ ಪತ್ನಿ ಪ್ರಿಯಕರನೊಂದಿಗೆ ಇರುವುದನ್ನು ನೋಡಿದ್ದಾನೆ. ಇದಾದ ನಂತರ ಕೊಲೆ ಮಾಡಿದ್ದಾನೆನ್ನಲಾಗಿದೆ.
ಘಟನೆ ಲಖಿಸರಾಯ್ ಜಿಲ್ಲೆಯ ಮೆಡ್ನಿಚೌಕ್ ಪೊಲೀಸ್ ಠಾಣೆಯ ರಿಷಿ ಪಹರ್‌ಪುರ ಗ್ರಾಮದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಗ್ರಾಮದಿಂದ ಬಾಲಕನೊಬ್ಬ ನಾಪತ್ತೆಯಾಗಿದ್ದ. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ರೋಹಿತ್ ಶವವನ್ನು ನದಿಯಿಂದ ವಶಪಡಿಸಿಕೊಳ್ಳಲಾಗಿತ್ತು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಆಗ ಗ್ರಾಮದ ಅದೇ ಮಹಿಳೆಯೊಂದಿಗೆ ಮೃತ ವ್ಯಕ್ತಿಗೆ ಅಕ್ರಮ ಸಂಬಂಧವಿರುವುದು ಗೊತ್ತಾಗಿದೆ.
ಪುರನ್ ಪಾಸ್ವಾನ್ ಪಾಟ್ನಾದಲ್ಲಿ ಮೇಸ್ತ್ರಿಯಾಗಿದ್ದು, ಮನೆಯ ಹೊರಗೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಆತನ ಪತ್ನಿ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಅದೇ ಗ್ರಾಮದ ರೋಹಿತ್ ಯಾದವ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. ಡಿಸೆಂಬರ್ 31 ರಂದು ಇದ್ದಕ್ಕಿದ್ದಂತೆ ಪುರನ್ ಪಾಸ್ವಾನ್ ಪಾಟ್ನಾದಿಂದ ತಡರಾತ್ರಿ ಮರಳಿದ್ದಾನೆ. ರೋಹಿತ್ ಜೊತೆ ತನ್ನ ಹೆಂಡತಿಯನ್ನು ಕಂಡು ಆಕ್ರೋಶಗೊಂಡಿದ್ದಾನೆ. ಕೊಡಲಿಯಿಂದ ಹತಲೆಗೆ ಹೊಡೆದು ರೋಹಿತ್ ಯಾದವ್‌ನನ್ನು ಕೊಂದು ಶವವನ್ನು ನದಿಗೆ ಎಸೆದಿದ್ದಾನೆ. ಮೃತದೇಹವನ್ನು ವಿಲೇವಾರಿ ಮಾಡುವಲ್ಲಿ ಆತನ ಪತ್ನಿಯೂ ನೆರವಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.