ಮೊಳಕೆ ಕಾಳುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಇವು ನಮ್ಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳನ್ನ ಒದಗಿಸುತ್ತದೆ. ನಿತ್ಯ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.
ತಜ್ಞರ ಪ್ರಕಾರ ಹುರಿದ ಆಹಾರಗಳಿಗಿಂತ ಹತ್ತು ಪಟ್ಟು ಹೆಚ್ಚು ಸತ್ವ ಮೊಳಕೆ ಬರಿಸಿದ ಆಹಾರದಲ್ಲಿ ಲಭ್ಯವಾಗುತ್ತದೆ. ಮಾಂಸ, ಮೀನು, ಮೊಟ್ಟೆಯಲ್ಲಿ ಇರುವಷ್ಟೇ ಪ್ರೊಟೀನ್ ಗಳು ಮೊಳಕೆ ಕಾಳುಗಳಲ್ಲೂ ಇವೆ.
ಇದು ಪೋಷಕಾಂಶಗಳನ್ನು ಸಮತೋಲನದಲ್ಲಿರಿಸಿ, ಅನಾವಶ್ಯಕ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುತ್ತದೆ. ಇದರಲ್ಲಿರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮೂಳೆಗಳನ್ನು ದೃಢಪಡಿಸುತ್ತದೆ. ಇದರಲ್ಲಿ ವಿಟಮಿನ್ ಎ ಅಂಶವೂ ಹೇರಳವಾಗಿದ್ದು, ಕಣ್ಣಿನ ಆರೋಗ್ಯ ಹಾಗೂ ದೃಷ್ಟಿ ಸುಧಾರಣೆಗೆ ನೆರವಾಗುತ್ತದೆ.
ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇದನ್ನು ಸೇವಿಸಲು ಕೊಡುವುದು ಬಹಳ ಒಳ್ಳೆಯದು. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಥವಾ ಗೆಡ್ಡೆಗಳು ಬೆಳೆಯದಂತೆ ಇದು ನೋಡಿಕೊಳ್ಳುತ್ತದೆ ಎನ್ನಲಾಗಿದೆ. ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.