alex Certify ಜೇನುತುಪ್ಪದ ಫೇಸ್ ಪ್ಯಾಕ್ ಬಳಸಿ ಮ್ಯಾಜಿಕ್ ನೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇನುತುಪ್ಪದ ಫೇಸ್ ಪ್ಯಾಕ್ ಬಳಸಿ ಮ್ಯಾಜಿಕ್ ನೋಡಿ….!

ಪ್ರತಿಯೊಬ್ಬರ ಮನೆಯಲ್ಲಿಯೂ ಔಷಧಿ ರೂಪದಲ್ಲಿಯಾದ್ರೂ ಜೇನುತುಪ್ಪವಿದ್ದೇ ಇರುತ್ತೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ಚರ್ಮಕ್ಕೂ ಬಹಳ ಪ್ರಯೋಜನಕಾರಿ.

ಅನೇಕ ಮಹಿಳೆಯರು ತಮ್ಮ ಸುಂದರ ಮುಖಕ್ಕಾಗಿ ದುಬಾರಿ ಬೆಲೆಯ ಸೌಂದರ್ಯ ಉತ್ಪನ್ನಗಳನ್ನ ಬಳಸ್ತಾರೆ. ಕೆಲವೊಮ್ಮೆ ಇದು ಮುಖದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದ್ರ ಬದಲು ಜೇನು ತುಪ್ಪವನ್ನು ಫೇಸ್ ಪ್ಯಾಕ್ ರೂಪದಲ್ಲಿ ಬಳಸಿದ್ರೆ ಸಾಕಷ್ಟು ಪ್ರಯೋಜನಗಳಿವೆ.

ಜೇನುತುಪ್ಪ–ಉಪ್ಪು: ಜೇನುತುಪ್ಪಕ್ಕೆ ಉಪ್ಪನ್ನು ಬೆರೆಸಿ ಮುಖಕ್ಕೆ ಸ್ಕ್ರಬ್ ರೂಪದಲ್ಲಿ ಬಳಸಿ. ಸ್ವಲ್ಪ ಸಮಯದ ನಂತ್ರ ಮುಖವನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಈ ಮಿಶ್ರಣ ಮುಖವನ್ನು ಮಾಯಿಶ್ಚರೈಸ್ ಮಾಡುವ ಜೊತೆಗೆ ಮುಖ ಹೊಳಪು ಪಡೆಯುತ್ತದೆ.

ಜೇನುತುಪ್ಪ-ನಿಂಬು: ಸೂರ್ಯನ ಬೆಳಕಿನಿಂದಾಗಿ ಚರ್ಮ ಕಪ್ಪಾಗುತ್ತದೆ. ಇದಕ್ಕೆ ಜೇನು-ನಿಂಬೆ ಹಣ್ಣಿನ ಫೇಸ್ ಪ್ಯಾಕ್ ಬೆಸ್ಟ್. ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮಿಶ್ರಣ ತಯಾರಿ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ. ಪ್ಯಾಕ್ ಒಣಗಿದ ಮೇಲೆ ಮುಖವನ್ನು ತೊಳೆದುಕೊಳ್ಳಿ.

ಜೇನುತುಪ್ಪ-ಅರಿಶಿನ-ಕಡಲೆಹಿಟ್ಟು : ಕಡಲೆ ಹಿಟ್ಟಿಗೆ ಅರಿಶಿನ, ನೀರು ಸೇರಿಸಿ ಮುಖಕ್ಕೆ ಹಚ್ಚಿಕೊಂಡಿರುತ್ತೀರಾ. ಆದ್ರೆ ಈ ಬಾರಿ ನೀರಿನ ಬದಲು ಜೇನುತುಪ್ಪವನ್ನು ಬಳಸಿ. ಒಂದು ದೊಡ್ಡ ಚಮಚ ಕಡಲೆ ಹಿಟ್ಟಿಗೆ ಒಂದು ಚಮಚ ಜೇನುತುಪ್ಪ, ಸ್ವಲ್ಪ ಅರಿಶಿನ ಬೆರೆಸಿ ಮಿಶ್ರಣ ಸಿದ್ಧಪಡಿಸಿಕೊಳ್ಳಿ. ಇದನ್ನು ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ನಂತ್ರ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದ್ರೆ ಚರ್ಮದ ಬಣ್ಣ ಹೊಳಪು ಪಡೆಯುತ್ತದೆ.

ಜೇನುತುಪ್ಪ-ಆ್ಯಪಲ್ ವಿನೆಗರ್ : ಒಂದು ಚಮಚ ಆ್ಯಪಲ್ ವಿನೆಗರ್ ಹಾಗೂ ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ. ಇದ್ರಿಂದ ಮುಖದ ಚರ್ಮ ಸ್ವಚ್ಛವಾಗಿ ಮೃದುವಾಗುತ್ತದೆ.

ಜೇನುತುಪ್ಪ-ಸಕ್ಕರೆ : ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ಸಕ್ಕರೆ ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷದ ನಂತ್ರ ಸ್ವಚ್ಛಗೊಳಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...