alex Certify ನೋಡಬನ್ನಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಬಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡಬನ್ನಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಬಗ

ಹುಲಿ ಸಂರಕ್ಷಣಾ ಕೇಂದ್ರವಾದ ನಾಗರಹೊಳೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಕರೆಯಲ್ಪಡುವ ಈ ಉದ್ಯಾನವನ ದೇಶದ ಅತ್ಯುತ್ತಮ ಅರಣ್ಯ ಮೀಸಲು ಪ್ರದೇಶಗಳಲ್ಲಿ ಒಂದು. ಇಲ್ಲಿ ಆಕರ್ಷಕ ಜಲಪಾತ, ಸುಂದರವಾದ ಕಣಿವೆಗಳು ಮತ್ತು ಸಣ್ಣ ಝರಿಗಳಿವೆ.

ಇಲ್ಲಿ ಹಲವು ಬಗೆಯ ಸಸ್ಯ, ಮರಗಳು ಮತ್ತು ಪ್ರಾಣಿ ಸಂಕುಲಗಳಿವೆ. ಇದು ಹುಲಿಗಳ ವಾಸಸ್ಥಾನ. ಅದರೊಂದಿಗೆ ಕರಡಿ, ಆನೆ. ಕೃಷ್ಣ ಮೃಗ, ಕಾಡುಹಂದಿ, ಪಂಗೋಲಿಯನ್, ಚಿರತೆ ಮತ್ತಿತರ ಪ್ರಾಣಿಗಳನ್ನೂ ಕಾಣಬಹುದು. ಪಕ್ಷಿ ಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೂ ಇದು ನೆಚ್ಚಿನ ತಾಣವೇ.

ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ಗಡಿ ಭಾಗವನ್ನು ಹಂಚಿಕೊಂಡಿದೆ. 1999ರಲ್ಲಿ ಈ ಪ್ರದೇಶವನ್ನು ಹುಲಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಯಿತು. ತೇಗ, ಗಂಧ, ಬೀಟೆ, ಸಿಲ್ವರ್ ಓಕ್, ಮೊದಲಾದ ಅಮೂಲ್ಯ ವೃಕ್ಷಗಳು ಈ ಅರಣ್ಯದಲ್ಲಿವೆ.

ಕಬಿನಿ, ಲಕ್ಷ್ಮಣತೀರ್ಥ ಮತ್ತು ನಾಗರಹೊಳೆ ಇಲ್ಲಿನ ಪ್ರಮುಖ ನದಿಗಳು. ನಾಗರ ಎಂದರೆ ಹಾವಿನಂತೆ ಸಂಚರಿಸುವ ನದಿ ತೊರೆಗಳು ಇಲ್ಲಿ ಹರಿಯುವುದರಿಂದ ಈ ಕಾಡುಗಳಿಗೆ ನಾಗರ ಹೊಳೆ ಎಂಬ ಹೆಸರು ಬಂದಿದೆ. ಇದು ಹಲವು ಸುಂದರ ಜಲಪಾತಗಳನ್ನು ಸೃಷ್ಟಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...