alex Certify Shocking: ವೈದ್ಯನಂತೆ ವೇಷ ಧರಿಸಿ ಆಪರೇಷನ್​ ಮಾಡಿದ ಸೆಕ್ಯೂರಿಟಿ ಗಾರ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ವೈದ್ಯನಂತೆ ವೇಷ ಧರಿಸಿ ಆಪರೇಷನ್​ ಮಾಡಿದ ಸೆಕ್ಯೂರಿಟಿ ಗಾರ್ಡ್

ಆಸ್ಪತ್ರೆಯ ಮಾಜಿ ಸೆಕ್ಯೂರಿಟಿ ಗಾರ್ಡ್​ ವೈದ್ಯನಂತೆ ವೇಷ ಧರಿಸಿ ಮಹಿಳೆಯ ಆಪರೇಷನ್​ ಮಾಡಿದ ಪರಿಣಾಮ ಆಕೆ ಮೃತಪಟ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಮಾಜಿ ಸೆಕ್ಯೂರಿಟಿ ಗಾರ್ಡ್​ ಮಾಡಿದ ಅವಾಂತರದಿಂದಾಗಿ 80 ವರ್ಷದ ಶಮೀಮಾ ಬೇಗಂ ಮೃತಪಟ್ಟಿದ್ದಾರೆ. ಬೆನ್ನಿನಲ್ಲಿ ಆದ ಗಾಯಕ್ಕೆ ಆಪರೇಷನ್​ ಮಾಡಲು ಹೋಗಿ ಸೆಕ್ಯೂರಿಟಿ ಗಾರ್ಡ್ ಲಾಹೋರ್​​ನ ಆಸ್ಪತ್ರೆಯಲ್ಲಿ ಈ ಅವಾಂತರ ಎಸಗಿದ್ದಾನೆ.

ಇನ್ನು ಈ ಘಟನೆಯ ಬಗ್ಗೆ ಮಾತನಾಡಿದ ಲಾಹೋರ್​​ನ ಮಾಯೋ ಆಸ್ಪತ್ರೆಯ ಆಡಳಿತ ಮಂಡಳಿಯ ಅಧಿಕಾರಿ, ಪ್ರತಿಯೊಬ್ಬ ವೈದ್ಯರು ಹಾಗೂ ಎಲ್ಲಾ ಸಮಯದಲ್ಲಿ ಏನು ಮಾಡ್ತಿದ್ದಾರೆ ಅನ್ನೋದನ್ನ ನಾವು ನೋಡ್ತಾ ಇರೋಕೆ ಆಗೋದಿಲ್ಲ. ಇದೊಂದು ದೊಡ್ಡ ಆಸ್ಪತ್ರೆಯಾಗಿದೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಆಪರೇಷನ್​ ಥಿಯೇಟರ್​​ನಲ್ಲಿ ಆತ ಯಾವ ರೀತಿಯ ಶಸ್ತ್ರಚಿಕಿತ್ಸೆ ಮಾಡಿದ್ದಾನೆ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಆಪರೇಷನ್​ ವೇಳೆ ಅರ್ಹ ತಂತ್ರಜ್ಞ ಕೂಡ ಇದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನ ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...