ಆಕಸ್ಮಿಕವಾಗಿ ಗಡಿ ದಾಟಿ ಬಂದಿದ್ದ ಮೂರು ವರ್ಷದ ಪಾಕಿಸ್ತಾನದ ಮಗುವನ್ನು ಭಾರತೀಯ ಗಡಿ ಭದ್ರತಾ ಪಡೆ ಯೋಧರು ಸುರಕ್ಷಿತವಾಗಿ ಪಾಕಿಸ್ತಾನದ ರೇಂಜರ್ ಗಳಿಗೆ ಹಸ್ತಾಂತರಿಸಿದ್ದಾರೆ.
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಪಂಜಾಬ್ ನ ಫಿರೋಜ್ಪುರ್ ಸೆಕ್ಟರ್ ನಲ್ಲಿ ಮಗು ಒಂದು ಅಳುತ್ತಾ ನಿಂತಿರುವುದನ್ನು ಗಡಿ ಭದ್ರತಾ ಪಡೆ ಯೋಧರು ಗಮನಿಸಿದ್ದಾರೆ.
ಈ ಮಗು ಗಡಿ ಸಮೀಪವಿರುವ ಪಾಕಿಸ್ತಾನದ ಹಳ್ಳಿ ಒಂದರಿಂದ ಆಕಸ್ಮಿಕವಾಗಿ ಬಂದಿರುವುದನ್ನು ಮನಗಂಡು ಪಾಕಿಸ್ತಾನದ ರೇಂಜರ್ ಗಳಿಗೆ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಮಗುವಿನ ತಂದೆಯು ಸಹ ಹಾಜರಿದ್ದ ಎಂದು ತಿಳಿದು ಬಂದಿದೆ.