ಇತ್ತೀಚಿನ ದಿನಗಳಲ್ಲಿ ಅನೇಕ ಮೊಬೈಲ್ ಅಪ್ಲಿಕೇಷನ್ ಗಳು ಮತ್ತು ವೆಬ್ಸೈಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪುರುಷರು ಹಾಗೂ ಮಹಿಳೆಯರ ಅನುಕೂಲಕ್ಕಾಗಿ ಅನೇಕ ಡೇಟಿಂಗ್ ಅಪ್ಲಿಕೇಷನ್ ಗಳೂ ಕೆಲಸ ಮಾಡ್ತಿವೆ. ಈ ಮಧ್ಯೆ ಇನ್ನೊಂದು ಅಪ್ಲಿಕೇಷನ್ ಚರ್ಚೆಯಲ್ಲಿದೆ. ಮುಸ್ಲಿಂ ಪುರುಷರಿಗೆ ಎರಡನೇ ಮಹಿಳೆ ಹುಡುಕಲು ಅನುಕೂಲವಾಗಲಿ ಎಂಬ ಕಾರಣಕ್ಕೆ ವೆಬ್ಸೈಟ್ ರಚಿಸಲಾಗಿದೆ.
ಈ ವೆಬ್ಸೈಟ್ ಗೆ ಸೆಕೆಂಡ್ ವೈಫ್ ಡಾಟ್ ಕಾಮ್ ಎಂದು ಹೆಸರಿಡಲಾಗಿದೆ. ಪಾಕಿಸ್ತಾನಿ ಮೂಲದ ಬ್ರಿಟಿಷ್ ಪ್ರಜೆ ಆಜಾದ್ ಚೈವಾಲಾ ಇದನ್ನು ಶುರು ಮಾಡಿದ್ದಾರೆ. ಯುಕೆ ಮತ್ತು ಪಶ್ಚಿಮ ದೇಶಗಳಲ್ಲಿ ವಾಸಿಸುವ ಮುಸ್ಲಿಂ ಪುರುಷರಿಗಾಗಿ ಈ ವೆಬ್ಸೈಟ್ ರಚಿಸಲಾಗಿದೆ. ನ್ಯಾಯ ಸಮ್ಮತವಾಗಿ ಅವರು ಎರಡನೇ ಮದುವೆಯಾಗಲು ಹುಡುಕಿಕೊಳ್ಳಬಹುದಾಗಿದೆ.
ಇಸ್ಲಾಂ ಧರ್ಮವು ಪುರುಷರಿಗೆ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅನುಮತಿ ನೀಡುತ್ತದೆ. ಮುಸ್ಲಿಂ ಪುರುಷರು ನಾಲ್ಕು ಮದುವೆಯಾಗಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ಇಂದಿಗೂ ಪುರುಷರು ಮತ್ತು ಮಹಿಳೆಯರಿಗೆ ಡೇಟಿಂಗ್ ಮತ್ತು ವಿವಾಹೇತರ ಸಂಬಂಧ ಬೆಳೆಸುವ ಸ್ವಾತಂತ್ರ್ಯವಿದೆ. ಆದರೆ ಮುಸ್ಲಿಂ ಪುರುಷರು ಹಾಗೆ ಮಾಡುವಂತಿಲ್ಲ. ಕಾನೂನು ಬದ್ಧವಾಗಿ ಎರಡನೇ ಪತ್ನಿ ಹುಡುಕಲು ಸೆಕೆಂಡ್ ವೈಫ್ ಡಾಟ್ ಕಾಮ್ ನೆರವಾಗಲಿದೆ.
ಪಾಕಿಸ್ತಾನದಲ್ಲಿ ಈ ವೆಬ್ಸೈಟ್ ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಇದಕ್ಕೆ ಉಚಿತವಾಗಿ ಹೆಸರು ನೋಂದಾಯಿಸಬಹುದು. ಆದ್ರೆ ಪ್ರೀಮಿಯಂ ಚಂದಾದಾರಿಕೆ ಪಡೆದಾಗ ಮಾತ್ರ ಸಂಪರ್ಕದ ವಿವರ ಸಿಗಲಿದೆ. ಇದಕ್ಕೆ ಪ್ರತಿ ತಿಂಗಳು 20 ಡಾಲರ್ ಪಾವತಿ ಮಾಡಬೇಕು. ಪರಸ್ಪರ ಭೇಟಿಯಾಗಿ, ಮದುವೆಯಾಗಲು ಇದು ಅವಕಾಶ ನೀಡುತ್ತದೆ ಎಂದು ಆಜಾದ್ ಹೇಳಿದ್ದಾನೆ.