alex Certify ದ್ವಿಪತ್ನಿತ್ವ ಪ್ರಕರಣದಲ್ಲಿ ಎರಡನೇ ಸಂಗಾತಿ ವಿರುದ್ಧ ಕ್ರಮವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿಪತ್ನಿತ್ವ ಪ್ರಕರಣದಲ್ಲಿ ಎರಡನೇ ಸಂಗಾತಿ ವಿರುದ್ಧ ಕ್ರಮವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ದ್ವಿಪತ್ನಿತ್ವ ಪ್ರಕರಣದಲ್ಲಿ ಎರಡನೇ ಸಂಗಾತಿ ಮತ್ತು ಅವರ ಬಂಧುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಎರಡನೇ ಪತ್ನಿಯ ಪೋಷಕರು ಮತ್ತು ಸಹೋದರಿಯ ವಿರುದ್ಧ ಹೂಡಿದ ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿದೆ. ಎರಡನೇ ಮದುವೆಯಾದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬಹುದೇ ಹೊರತಾಗಿ ಆತನನ್ನು ಮದುವೆಯಾದ ಎರಡನೇ ಪತ್ನಿ ಮತ್ತು ಅವರ ಸಂಬಂಧಿಕರ ವಿರುದ್ಧ ಐಪಿಸಿ ಸೆಕ್ಷನ್ 494ರ ಅಡಿ ಪ್ರಕರಣ ದಾಖಲಿಸಲಾಗದು ಎಂದು ಆದೇಶ ನೀಡಿದೆ.

ಚಿತ್ರದುರ್ಗದ ಜೆಎಂಎಫ್ಸಿ ಕೋರ್ಟ್ ನಲ್ಲಿ ತಮ್ಮ ವಿರುದ್ಧ ಹೂಡಿದ ಪ್ರಕರಣ ರದ್ದು ಮಾಡುವಂತೆ ಕೋರಿ 2ನೇ ಪತ್ನಿಯ ಪೋಷಕರು ಮತ್ತು ಅವರ ಸಂಬಂಧಿಕರು ಸಲ್ಲಿಸಿದ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠ ಆದೇಶ ನೀಡಿದೆ.

ಐಪಿಸಿ ಸೆಕ್ಷನ್ 494ರ ಅಡಿ ಹಿಂದಿನ ಮದುವೆ ಚಾಲ್ತಿಯಲ್ಲಿದ್ದಾಗ ಪತಿ ಎರಡನೇ ಮದುವೆಯಾದರೆ ಆಗ ಆತನನ್ನು ವಿಚಾರಣೆಗೆ ಒಳಪಡಿಸಿಬಹುದೇ ಹೊರತು ಆತನನ್ನು ಎರಡನೇ ಮದುವೆ ಆದವರು ಮತ್ತು ಅವರ ಕುಟುಂಬದವರನ್ನಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮೊದಲ ಪತಿ ಅಥವಾ ಪತ್ನಿ ಬದುಕಿದ್ದಾಗಲೇ ಪತಿ ಅಥವಾ ಪತ್ನಿ ಇನ್ನೊಂದು ಮದುವೆಯಾದರೆ ಅದು ಅಪರಾಧವಾಗುತ್ತದೆ. ಅಂತಹ ಪ್ರಕರಣಗಳಲ್ಲಿ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಅದರಲ್ಲಿಯೂ ಕೆಲವು ವಿನಾಯಿತಿಗಳು ಇವೆ. ಈ ಪ್ರಕರಣದಲ್ಲಿ ಅದು ಅನ್ವಯವಾಗುತ್ತದೆ. ಎರಡನೇ ಮದುವೆಯಲ್ಲಿ ಭಾಗವಹಿಸಿದ್ದರು ಎನ್ನುವ ಕಾರಣಕ್ಕೆ ಎರಡನೇ ಪತ್ನಿಯ ಪೋಷಕರು ಮತ್ತು ಬಂಧುಗಳನ್ನು ವಿಚಾರಣೆಗೆ ಒಳಪಡಿಸಲಾಗದು ಎಂದು ಕೋರ್ಟ್ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...