ನವದೆಹಲಿ: ಚೀನಾದಿಂದ ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಿಸಲಾಗಿದೆ. ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಾಣ ಮಾಡಲಾಗಿದ್ದು, ಉಪಗ್ರಹ ಚಿತ್ರಗಳ ಮೂಲಕ ಸಾಬೀತಾಗಿದೆ.
2019 ರಲ್ಲಿ ತೆಗೆದ ಉಪಗ್ರಹ ಚಿತ್ರದಲ್ಲಿ ಗ್ರಾಮದ ಇರಲಿಲ್ಲ. ವರ್ಷದ ನಂತರ ತೆಗೆದ ಉಪಗ್ರಹದ ಚಿತ್ರದಲ್ಲಿ ಗ್ರಾಮ ಇರುವುದು ಪತ್ತೆಯಾಗಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಕನಿಷ್ಠ 60 ಕಟ್ಟಡಗಳ ಸಮಯವನ್ನು ನಿರ್ಮಿಸಿದೆ ಎನ್ನುವುದು ಉಪಗ್ರಹ ಚಿತ್ರಗಳಲ್ಲಿ ಗೊತ್ತಾಗಿದೆ.
ಉಪಗ್ರಹ ಚಿತ್ರಗಳ ಪ್ರಕಾರ, 2019 ರಲ್ಲಿ ಕಟ್ಟಡಗಳ ಸಮೂಹ ಇರಲಿಲ್ಲ. ಅರುಣಾಚಲ ಪ್ರದೇಶದಲ್ಲಿ ಚೀನಾ ನಿರ್ಮಿಸಿದ ಈ ಗ್ರಾಮ ಅತಿಕ್ರಮಣದಿಂದ ಕೂಡಿದೆ. ಗಡಿ ಪ್ರದೇಶದಲ್ಲಿ ಚೀನಾ ಹಲವಾರು ವರ್ಷಗಳಿಂದ ಅಕ್ರಮವಾಗಿ ನಿರ್ಮಾಣ ಚಟುವಟಿಕೆ ಕೈಗೊಂಡಿದೆ. ಎಲ್.ಎ.ಸಿ. ಮತ್ತು ಅಂತರರಾಷ್ಟ್ರೀಯ ಗಡಿ ರೇಖೆಯ ನಡುವಿನ ಪ್ರದೇಶದಲ್ಲಿ ಸುಮಾರು ಆರು ಕಿಲೋಮೀಟರ್ ದೂರದಲ್ಲಿ ಹಳ್ಳಿಯನ್ನು ನಿರ್ಮಿಸಲಾಗಿದೆ. ನಿರ್ಮಾಣ ಮಾಡಿದ ಹಳ್ಳಿ ವಾಸ್ತವ ನಿಯಂತ್ರಣ ರೇಖೆಯ ನಡುವೆ ಇದೆ ಎಂಬುದು ಉಪಗ್ರಹ ಚಿತ್ರದಲ್ಲಿ ಗೊತ್ತಾಗಿದೆ ಎಂದು ವರದಿಯಾಗಿದೆ.