ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡ್ತಿದ್ದರೆ ಅಥವಾ ಹೂಡಿಕೆ ಮಾಡುವ ಪ್ಲಾನ್ ನಲ್ಲಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಅಕ್ಟೋಬರ್ 1ರಿಂದ ಷೇರು ಮಾರುಕಟ್ಟೆ ಹೂಡಿಕೆ ನಿಯಮದಲ್ಲಿ ಕೆಲ ಬದಲಾವಣೆಯಾಗ್ತಿದೆ. ಸ್ಟಾಕ್ ಮಾರುಕಟ್ಟೆ ನಿಯಂತ್ರಕ ಸೆಬಿ ಈ ಬಗ್ಗೆ ಮಾಹಿತಿ ನೀಡಿದೆ.
ಸೆಬಿ ಹೊರಡಿಸಿದ ಆದೇಶದ ಪ್ರಕಾರ, ಅಕ್ಟೋಬರ್ 1 ರಿಂದ ಹೊಸ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗಳನ್ನು ತೆರೆಯುವವರಿಗೆ ನಾಮನಿರ್ದೇಶನದ ಆಯ್ಕೆಯನ್ನು ನೀಡಲಾಗುವುದು. ಇದು ಕೇವಲ ಒಂದು ಆಯ್ಕೆಯಾಗಿದ್ದರೂ, ನಾಮನಿರ್ದೇಶನವಿಲ್ಲದೆ ಟ್ರೇಡಿಂಗ್ ಖಾತೆಯನ್ನು ತೆರೆಯಬಹುದು. ಸೆಬಿ ನಾಮನಿರ್ದೇಶನ ಫಾರ್ಮ್ ಬಿಡುಗಡೆ ಮಾಡಿದೆ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯುವಾಗ ಹೂಡಿಕೆದಾರರು ನಾಮನಿರ್ದೇಶನ ಮಾಡಲು ಬಯಸದಿದ್ದರೆ, ಅವರು ಈ ಮಾಹಿತಿಯನ್ನು ಸೆಬಿಗೆ ನೀಡಬೇಕಾಗುತ್ತದೆ.
ಇದಕ್ಕಾಗಿ ಡಿಲ್ಕರೇಷನ್ ಫಾರ್ಮ್ ಭರ್ತಿ ಮಾಡಬೇಕು. ಡಿಮ್ಯಾಟ್ ಖಾತೆಯನ್ನು ಹೊಂದಿರುವವರೂ ನಾಮನಿರ್ದೇಶನ ಫಾರ್ಮನ್ನು ಮಾರ್ಚ್ 31, 2022 ರೊಳಗೆ ಭರ್ತಿ ಮಾಡಬೇಕಾಗುತ್ತದೆ. ನಾಮಿನಿ ಸೌಲಭ್ಯ ಬೇಡ ಎನ್ನುವವರು ಪ್ರತ್ಯೇಕ ಫಾರ್ಮ್ ಭರ್ತಿ ಮಾಡಬೇಕು. ನಾಮನಿರ್ದೇಶನ ಅಥವಾ ಘೋಷಣೆ ಫಾರ್ಮ್ ಭರ್ತಿ ಮಾಡದಿದ್ದರೆ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗುವುದು.