ಕೋವಿಡ್ ಲಾಕ್ಡೌನ್ನಿಂದಾಗಿ ಎಲ್ಲೆಡೆ ಡಲ್ ಮೂಡ್ ಇರುವ ಕಾರಣ ನಮ್ಮಲ್ಲಿ ಬಹುತೇಕರಿಗೆ ಮನದುಂಬಿ ನಗಲು ಕಾರಣಗಳು ಬೇಕಾಗಿವೆ. ಈ ಕಾರಣದಿಂದಾಗಿಯೇ ಏನೋ ನೆಟ್ಫ್ಲಿಕ್ಸ್ನಲ್ಲಿ ಹಾರರ್ ಕಂಟೆಂಟ್ ನೋಡುವ ಮಂದಿಯ ಸಂಖ್ಯೆ ಕಡಿಮೆಯಾಗಿದ್ದು, ಸ್ಟಾಂಡ್-ಅಪ್ ಕಾಮಿಡಿ ವೀಕ್ಷಕರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.
ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಕ್ವೆಂಟಿನ್ ಕ್ವಾರಂಟಿನೋ ಹಾಗೂ ಕೊರೋನಾ ವೈರಸ್ ಮೀಮ್ಸ್ ಎಂಬ ರೆಡ್ಡಿಟ್ ಥ್ರೆಡ್ಗಳು ತಮ್ಮ ಫನ್ನಿ ಕಂಟೆಂಟ್ನಿಂದ ಜನಪ್ರಿಯತೆ ಗಿಟ್ಟಿಸುತ್ತಿವೆ.
ಜೂಮ್ ಮೀಟಿಂಗ್ಸ್, ಹ್ಯಾಂಡ್-ವಾಶ್ ಹಾಡುಗಳು, ಮನೆ ಹೇರ್ಕಟ್ಗಳ ಕುರಿತಂತೆ ಸಾಕಷ್ಟು ಜೋಕ್ ಮಾಡಿಕೊಂಡು ನಾವೆಲ್ಲಾ ಕಾಲ ಕಳೆದಿದ್ದೇವೆ. ಆದರೆ ಸಾವುಗಳ ಸಂಖ್ಯೆಯನ್ನು ಕಂಡು ಮರುಗುವುದರಿಂದ ಸ್ನೇಹಿತರು ಕಳುಹಿಸುವ ವಿಡಿಯೋಗಳನ್ನು ಕಂಡು ನಗುವ ನಡುವೆ ನಮಗೆಷ್ಟು ಸಮಯ ಹಿಡಿಯುತ್ತಿದೆ ಎಂಬುದೇ ಅಚ್ಚರಿಯ ವಿಚಾರ.
ಈ ಮೂಲಕ ಸಾಂಕ್ರಮಿಕದ ಕಾಲಘಟ್ಟವು ಕಾಮಿಡಿಯ ಮಹತ್ವವನ್ನು ಇನ್ನಷ್ಟು ಒತ್ತಿ ಹೇಳುವಂತೆ ಇದೆ.