
ಧಾರವಾಡ: ಧಾರವಾಡ ತಾಲ್ಲೂಕು ಕಚೇರಿ ಸಮೀದಲ್ಲೇ ನಕಲಿ ನೋಟರಿ ಜಾಲ ಪತ್ತೆಯಾಗಿದೆ. ದಸ್ತು ಬರಹಗಾರರ ಅಂಗಡಿಯೊಂದರಲ್ಲಿ ನಕಲಿ ನೋಟರಿ ಸೀಲ್ ಪತ್ತೆ ಮಾಡಲಾಗಿದೆ.
ವಕೀಲರ ಸಂಘದಿಂದ ಖುದ್ದಾಗಿ ದಾಳಿ ಮಾಡಿ ದಾಖಲೆ ಜಪ್ತಿ ಮಾಡಲಾಗಿದೆ. ವಿವಿಧ ಯೋಜನೆಗಳಿಗೆ ನಕಲಿ ನೋಟರಿಯ ಮೂಲಕ ದೃಢೀಕರಣ ನೀಡಲಾಗಿದೆ. ಹೀಗೆ ನಕಲಿ ದೃಢೀಕರಣ ನೀಡಲಾದ ಅರ್ಜಿಗಳು, ಕೆಲವು ದಾಖಲೆಗಳು ಪತ್ತೆಯಾಗಿದೆ.
ದಸ್ತು ಬರಹಗಾರರ ಅಂಗಡಿಯಲ್ಲಿ ನಕಲಿ ನೋಟರಿ ಸೀಲ್ ಪತ್ತೆಯಾಗಿದೆ. ಅಧಿಕೃತ ವಕೀಲರ ನಕಲಿ ಸೀಲ್ ಮತ್ತು ಸಹಿ ಬಳಸಿ ವಂಚಿಸುತ್ತಿರುವುದು ಬಯಲಾಗಿದೆ. ಈ ಸಂಬಂಧ ದೂರು ನೀಡುವಂತೆ ತಹಶೀಲ್ದಾರ್ ಗೆ ಮನವಿ ಮಾಡಲಾಗಿದ್ದು, ವಕೀಲರ ಸಂಘದಿಂದ ಕಾನೂನು ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.