ಸಮುದ್ರ ಗರ್ಭದಾಳದೊಳಗಿನ ಪ್ರಪಂಚ ನಮ್ಮೆಲ್ಲರ ಊಹೆಗೂ ಮೀರಿದ್ದು. ಆ ರೋಚಕ ಪ್ರಪಂಚದೊಳಗೆ ಹೋಗುವ ಅವಕಾಶ ಪ್ರತಿಯೊಬ್ಬರಿಗೂ ಸಿಗುವುದಿಲ್ಲ. ಆದರೆ ಸ್ಕೂಬಾ ಡೈವರ್ಗಳಿಗೆ ಅಂತ ಪ್ರಪಂಚದೊಳಗೆ ಪದೇ ಪದೇ ಹೋಗಿ ಅದನ್ನ ನೋಡುವ ಅವಕಾಶ ಸಿಕ್ಕಿರುತ್ತೆ. ಅದೇ ರೀತಿ ಸಿಕ್ಕ ಅವಕಾಶವನ್ನ ಉಪಯೋಗಿಸಿಕೊಂಡಿದ್ದ ಓರ್ವ ಸ್ಕೂಬಾ ಡೈವರ್.
ನೀರಿನೊಳಗೆ ಡೈವ್ ಮಾಡಿರೋ ಸ್ಕೂಬಾ ಡೈವರ್ ಸಮುದ್ರದಾಳದೊಳಗಿದ್ದ ಅಕ್ಟೋಪಸ್ ಒಂದರ ಜೊತೆಗೆ ಆಟ ಆಡುತ್ತಿದ್ದ ವಿಡಿಯೋ ಅದು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಕ್ಟೊಪಸ್ ಹೇಗೆ ವ್ಯಕ್ತಿಯ ಜೊತೆ ಆಟ ಆಡ್ತಾ ಆಡ್ತಾ ಇನ್ನೂ ಸುತ್ತಮುತ್ತಲಿನ ಬಣ್ಣಗಳನ್ನು ಬದಲಾಯಿಸುವ ಅದ್ಭುತ ಸಾಮರ್ಥ್ಯವುಳ್ಳ ಅಕ್ಟೋಪಸ್ ಅದಾಗಿದೆ.
ವಂಡರ್ ಆಫ್ ಸೈನ್ಸ್ ಟ್ವಿಟರ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದ 23 ಸೆಕೆಂಡುಗಳ ವೀಡಿಯೋ, ಅಕ್ಟೋಪಸ್ ಸಮುದ್ರದ ತಳದಲ್ಲಿ ಅಲೆದಾಡುವುದನ್ನು ತೋರಿಸಿದೆ. ಮತ್ತು ಅದು ಎದುರಿಸಿದ ಪ್ರಾಣಿಗಳಿಗೆ ತನ್ನ ಎದುರಿರೋ ಪ್ರಾಣಿಗಳಿಗೆ ಅನುಗುಣವಾಗಿ ತನ್ನ ಚರ್ಮದ ಬಣ್ಣವನ್ನು ಬದಲಾಯಿಸುವುದು ಕಂಡು ಬಂದಿದೆ.
ಪ್ರಾಣಿಗಳು ಮನುಷ್ಯರ ಜೊತೆಗೆ ಬೆರೆಯವುದು ತುಂಬಾ ಅಪರೂಪ. ಅದರಲ್ಲೂ ಅಕ್ಟೋಪಸ್ ಮನುಷ್ಯನ ಜೊತೆ ಈ ರೀತಿ ಆಟ ಆಡುವ ದೃಶ್ಯ ಅಪರೂಪದಲ್ಲೇ ಅಪರೂಪ. ಈ ವಿಡಿಯೋ ನೋಡಿ ನೆಟ್ಟಿವರು ಫುಲ್ ಖುಷಿ ಆಗಿದ್ದಂತೂ ನಿಜ.
https://twitter.com/buitengebieden/status/1548006908358823936?ref_src=twsrc%5Etfw%7Ctwcamp%5Etweetembed%7Ctwterm%5E1548006908358823936%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-video-scuba-diver-plays-with-octopus-under-sea-internet-delighted-3163227