ಹವ್ಯಾಸಿ ಛಾಯಾಗ್ರಾಹಕ ಸೂರ್ಯಾಸ್ತದ ಸಮಯದಲ್ಲಿ ಏಂಜೆಲ್ ಅವತಾರದಲ್ಲಿ ಸೂರ್ಯನನ್ನು ತನ್ನ ಕ್ಯಾಮರಾದಲ್ಲಿ ಸೆರೆಯಾಗಿಸಿದ್ದಾನೆ
“ರೆಕ್ಕೆಗಳನ್ನು ಹೊಂದಿರುವ ದೇವತೆ” ಯಂತೆ ಕಾಣಿಸುವ ಚಿತ್ರ ವೈರಲ್ ಆಗಿದೆ. 56 ವರ್ಷ ವಯಸ್ಸಿನ ಸ್ಟುವರ್ಟ್ ಮುರ್ರೆ ತಮ್ಮ ಸ್ಮಾರ್ಟ್‌ಫೋನ್ ಬಳಸಿ ಅತ್ಯಂತ ಪರಿಪಕ್ವ ಸಮಯವನ್ನು ಕ್ಲಿಕ್ ಮಾಡಿದ್ದಾರೆ.
ಸ್ಕಾಟ್ಲೆಂಡ್‌ನ ಅಬರ್‌ಡೀನ್‌ಶೈರ್‌ನ ಪೋರ್ಟ್‌ಸೋಯ್‌ನ ಕರಾವಳಿ ಪಟ್ಟಣದಲ್ಲಿ ತನ್ನ ಮನೆಯ ಸಮೀಪ ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದಾಗ ಆ ಕ್ಷಣವನ್ನು ಸೆರೆಹಿಡಿದಿದ್ದಾರೆ.
ಇದೇ ವೇಳೆ ತಾನು ಫೋಟೊ ತೆಗೆದ ಸಂದರ್ಭದಲ್ಲಿನ ಘಟನೆ ಮತ್ತು ಛಾಯಾಗ್ರಹಣದ ಬಗೆಗಿನ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.