ಬೆಂಗಳೂರು : ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದಿದ್ದು, ದೇವನಹಳ್ಳಿ ಬಳಿ ಮತ್ತೊಂದು ಟೋಲ್ ಆರಂಭವಾಗಿದ್ದು, ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಹೊಸದಾಗಿ ಮತ್ತೊಂದು ಟೋಲ್ ಪ್ಲಾಜಾ ಆರಂಭವಾಗಿದೆ. ನಿನ್ನೆ ಮಧ್ಯರಾತ್ರಿಯಿಂದ ಹೊಸ ಟೋಲ್ ಜಾರಿ ಆಗಿದ್ದು, , ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಬರೆ ಎಳೆದಂತಾಗಿದೆ.
ಟೋಲ್ ದರ ಎಷ್ಟು..?
1) ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 2,375 ರೂ.
2) ಕಾರು, ಲಘು ಮೋಟಾರು ವಾಹನಗಳಿಗೆ ಏಕಮುಖ ಸಂಚಾರಕ್ಕೆ 70, ಅದೇ ದಿನ ವಾಪಸ್ ಬಂದರೆ 105 ರೂ ಫಿಕ್ಸ್ ಫಿಕ್ಸ್ ಮಾಡಲಾಗಿದೆ.
3)ಲಘು ವಾಣಿಜ್ಯ ಮತ್ತು ಸರಕು ವಾಹನಗಳು, ಮಿನಿ ಬಸ್, ಏಕಮುಖ ಸಂಚಾರಕ್ಕೆ 115, ಅದೇ ದಿನ ವಾಪಸ್ ಬಂದರೆ 175 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 3,835 ರೂ. ಫಿಕ್ಸ್ ಮಾಡಲಾಗಿದೆ.
4)ಬಸ್, ಟ್ರಕ್ಗಳ ಏಕಮುಖ ಸಂಚಾರಕ್ಕೆ 240 ರೂ ಫಿಕ್ಸ್ ಮಾಡಲಾಗಿದ್ದು, ಅದೇ ದಿನ ಮರಳಿ ಬಂದರೆ 360 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 8,040 ರೂ. ಇರಲಿದೆ.
5)4 ರಿಂದ 6 ಆಕ್ಸೆಲ್ಗಳ ವಾಹನಗಳ ಏಕಮುಖ ಸಂಚಾರಕ್ಕೆ 380 ರೂ. ಫಿಕ್ಸ್ ಆಗಿದ್ದು, ಅದೇ ದಿನ ವಾಪಸ್ ಬಂದರೆ 565 ರೂ. ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 12,605 ರೂ. ಆಗಿದೆ.
6) ವಾಣಿಜ್ಯ ವಾಹನಗಳು ಏಕಮುಖ ಸಂಚಾರಕ್ಕೆ 265 ರೂ. ಆಗಿದ್ದು, ವಾಪಸ್ ಬಂದರೆ 395 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 8,870 ರೂ. ಇರಲಿದೆ. 7 ಅಥವಾ ಅದಕ್ಕೂ ಹೆಚ್ಚಿನ ಆಕ್ಸೆಲ್ ವಾಹನಗಳು ಏಕಮುಖ ಸಂಚಾರಕ್ಕೆ 460 ರೂ. ಅದೇ ದಿನ ಮರಳಿ ಬಂದರೆ 690 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 15, 345 ರೂ.
ಸಾಂದರ್ಭಿಕ ಚಿತ್ರ