alex Certify ಜನಸಾಮಾನ್ಯರ ಜೇಬಿಗೆ ಕತ್ತರಿ : ನಾಳೆಯಿಂದ ಬದಲಾಗಲಿದೆ ಈ ನಿಯಮಗಳು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರ ಜೇಬಿಗೆ ಕತ್ತರಿ : ನಾಳೆಯಿಂದ ಬದಲಾಗಲಿದೆ ಈ ನಿಯಮಗಳು !

ಆಗಸ್ಟ್ ತಿಂಗಳಿನಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳು ಬದಲಾಗಲಿದ್ದು, ಈ ಮೂಲಕ ಕೆಲವು ಬದಲಾವಣೆಗಳು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿದೆ. ಈಗಾಗಲೇ ದಿನನಿತ್ಯ ಬಳಕೆಯ ವಸ್ತು, ಆಹಾರ ಪದಾರ್ಥಗಳು ಬೆಲೆ ಏರಿಕೆಯಾಗಿದ್ದು, ಇದರ ನಡುವೆ ಮತ್ತೊಂದಷ್ಟು ನಿಯಮಗಳು ಬದಲಾಗಲಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.

ದುಬಾರಿಯಾಗಲಿದೆ ಎಟಿಎಂ ವಹಿವಾಟು : ಆಗಸ್ಟ್ 1 ರಿಂದ ಎಟಿಎಂ ವಹಿವಾಟು ದುಬಾರಿಯಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆದೇಶದ ನಂತರ, ಆಗಸ್ಟ್ 1 ರಿಂದ ಬ್ಯಾಂಕುಗಳು ಎಟಿಎಂಗಳಲ್ಲಿ ಇಂಟರ್ಚೇಂಜ್ ಶುಲ್ಕವನ್ನು 15 ರಿಂದ 17 ರೂಪಾಯಿಗೆ ಹೆಚ್ಚಿಸಿದೆ.

ಇಂಟರ್ಚೇಂಜ್ ಶುಲ್ಕವು ಕ್ರೆಡಿಟ್ ಕಾರ್ಡ್ಗಳು ಅಥವಾ ಡೆಬಿಟ್ ಕಾರ್ಡ್ಗಳ ಮೂಲಕ ಪಾವತಿಗಳನ್ನು ಪ್ರಕ್ರಿಯೆಗೊಳಿಸುವ ವ್ಯಾಪಾರಿಗಳಿಗೆ ಬ್ಯಾಂಕುಗಳು ವಿಧಿಸುವ ಶುಲ್ಕವಾಗಿದೆ.

ಹೊಸ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂನಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಗ್ರಾಹಕರು, ಮೆಟ್ರೊ ನಗರಗಳಲ್ಲಿ ಮೂರು ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ಎಟಿಎಂ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

ಐಸಿಐಸಿಐ ಬ್ಯಾಂಕಿಂಗ್ ಸೇವೆಗಳು ದುಬಾರಿ : ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ, ಎಟಿಎಂ ವಹಿವಾಟು ಮತ್ತು ಚೆಕ್ಬುಕ್ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ಇದು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ನಿಯಮಿತ ಉಳಿತಾಯ ಖಾತೆಗೆ ಐಸಿಐಸಿಐ ಬ್ಯಾಂಕ್ ಪ್ರತಿ ತಿಂಗಳು 4 ನಗದು ವಹಿವಾಟುಗಳನ್ನು ಉಚಿತವಾಗಿ ನೀಡುತ್ತದೆ. ಉಚಿತ ಮಿತಿಯ ನಂತರ ಪ್ರತಿ ವಹಿವಾಟಿಗೆ 150 ರೂಪಾಯಿ ಶುಲ್ಕ ವಿಧಿಸುತ್ತದೆ.
ಇದಲ್ಲದೆ ಐಸಿಐಸಿಐ ಬ್ಯಾಂಕ್, ಒಂದು ವರ್ಷದಲ್ಲಿ 25 ಪುಟಗಳ ಚೆಕ್ ಬುಕ್ಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅದರ ನಂತರ 10 ಪೇಜ್ ಚೆಕ್ ಬುಕ್ಗೆ 20 ರೂಪಾಯಿ ಶುಲ್ಕ ವಿಧಿಸುತ್ತದೆ.

ಸಂಬಳ, ಪಿಂಚಣಿ, ಇಎಂಐ ನಿಯಮಗಳಲ್ಲಿ ಬದಲಾವಣೆ : ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ನ ನಿಯಮಗಳನ್ನು ಆರ್ಬಿಐ ಬದಲಾಯಿಸಿದೆ. ಈ ಬದಲಾವಣೆಯಡಿ ಶನಿವಾರ ಮತ್ತು ಭಾನುವಾರ ಕೂಡ ಸಂಬಳ ಅಥವಾ ಪಿಂಚಣಿ ಪಡೆಯಬಹುದು. ಈ ಹೊಸ ನಿಯಮಗಳು ಆಗಸ್ಟ್ 1, 2021 ರಿಂದ ಜಾರಿಗೆ ಬರಲಿವೆ.
ಸಿಲಿಂಡರ್ ಬೆಲೆ : ಆಗಸ್ಟ್ 1 ರಿಂದ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಬದಲಾವಣೆಯಾಗಲಿದೆ. ದೇಶೀಯ ಎಲ್ಪಿಜಿ ಮತ್ತು ವಾಣಿಜ್ಯ ಸಿಲಿಂಡರ್ ಗಳ ಹೊಸ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನ ನಿಗದಿಪಡಿಸಲಾಗುತ್ತದೆ. ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 25.50 ರೂಪಾಯಿಗೆ ಹೆಚ್ಚಿಸಲಾಗಿದೆ.

RBI ಸಾಲ ನೀತಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀತಿಯನ್ನು ಆಗಸ್ಟ್ ನಲ್ಲಿ ಪ್ರಕಟಿಸಲಿದೆ. ಬಡ್ಡಿದರಗಳಲ್ಲಿನ ಬದಲಾವಣೆಯನ್ನು ಹಣಕಾಸು ನೀತಿ ಸಮಿತಿ ನಿರ್ಧರಿಸಲಿದೆ. ಎಂಪಿಸಿಯ ಈ ಸಭೆ ಆಗಸ್ಟ್ 4-6 ರ ನಡುವೆ ನಡೆಯಲಿದೆ.

ಹೋಂಡಾ ಕಾರುಗಳ ಬೆಲೆ ಹೆಚ್ಚಳ : ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರುಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಿದೆ. ಆಗಸ್ಟ್ ನಲ್ಲಿ ಬೆಲೆ ಏರಿಕೆಯಾಗಲಿದೆ. ಆದ್ರೆ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...