alex Certify ಅದ್ಭುತ ಆವಿಷ್ಕಾರ: ಹೃದಯ ಬಡಿತ ಕೇಳುವ ಬಟ್ಟೆ ತಯಾರಿಸಿದ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಭುತ ಆವಿಷ್ಕಾರ: ಹೃದಯ ಬಡಿತ ಕೇಳುವ ಬಟ್ಟೆ ತಯಾರಿಸಿದ ವಿಜ್ಞಾನಿಗಳು

ವಿಜ್ಞಾನಿಗಳು ಅದ್ಭುತ ಆವಿಷ್ಕಾರ ಮಾಡಿದ್ದಾರೆ. ಅಕ್ಷರಶಃ ನಿಮ್ಮ ಹೃದಯ ಬಡಿತವನ್ನು ಕೇಳುವಂತಹ ಬಟ್ಟೆ ತಯಾರಿಸಿದ್ದಾರೆ. ನಿಮ್ಮ ಹೃದಯ ಬಡಿತ ಕೇಳಲು ಈ ಉಡುಗೆ ಧರಿಸಿ…

ಬಿಸಿಲು, ಮಳೆ ಮತ್ತು ಚಳಿಯಿಂದ ದೇಹವನ್ನು ರಕ್ಷಿಸಲು ಬಟ್ಟೆಗಳನ್ನು ಧರಿಸಲಾಗುತ್ತದೆ. ಕಾಲಾನಂತರದಲ್ಲಿ ಬದಲಾವಣೆಗಳ ಭಾಗವಾಗಿ ಧರಿಸಿರುವ ಉಡುಪುಗಳು ಸಹ ವಿವಿಧ ರೂಪಗಳನ್ನು ಪಡೆದುಕೊಂಡವು. ಸಂದರ್ಭ ಸೀಸನ್‌ ಗೆ ತಕ್ಕಂತೆ ಬಟ್ಟೆ ಹಾಕಿಕೊಳ್ಳುತ್ತೇವೆ. ಆದರೆ, ಈಗ ಕೆಲವರು ಧರಿಸುವ ಬಟ್ಟೆಯೂ ಸ್ಟೇಟಸ್ ಸಿಂಬಲ್ ಆಗಿಬಿಟ್ಟಿದೆ. ಆದರೆ ಈಗ ಅದೇ ಉಡುಪಿನಲ್ಲಿ ನಾವು ನಮ್ಮ ಹೃದಯ ಬಡಿತವನ್ನು ಕೇಳಬಹುದು ಎಂದು ಸಂಶೋಧಕರು ಹೇಳುತ್ತಾರೆ.

ಇಲ್ಲಿಯವರೆಗೆ ನಾವು ಹೃದಯ ಬಡಿತವನ್ನು ಕಂಡುಹಿಡಿಯಲು Fitbit ಅಥವಾ Apple Watch ಅನ್ನು ಬಳಸುತ್ತಿದ್ದೇವೆ. ಈಗ ಈ ಪಟ್ಟಿಗೆ ಮತ್ತೊಂದು ಐಟಂ ಸೇರ್ಪಡೆಯಾಗಿದೆ. ಇದನ್ನು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಂಡುಹಿಡಿದಿದೆ. ಇದೊಂದು ಬಟ್ಟೆಯಾಗಿದೆ. ನಿಮ್ಮ ಹೃದಯ ಬಡಿತವನ್ನು ತಿಳಿಯಲು ನೀವು ಈ ಉಡುಪನ್ನು ಧರಿಸಿದರೆ ಸಾಕು. ಇದು ಮೈಕ್ರೊಫೋನ್ ಮತ್ತು ಸ್ಪೀಕರ್‌ ನಂತೆ ಕಾರ್ಯನಿರ್ವಹಿಸುತ್ತದೆ. ಇದು ಹೃದಯ ಬಡಿತವನ್ನು ಅಳೆಯುವ ಸಾಧನಗಳನ್ನು ಒಳಗೊಂಡಿದೆ.

ಧ್ವನಿಯನ್ನು ಯಾಂತ್ರಿಕ ಕಂಪನಗಳಾಗಿ ಪರಿವರ್ತಿಸುವುದು. ಅಲ್ಲದೆ, ಇದು ಮೈಕ್ರೊಫೋನ್ ಕಾರ್ಯಗಳಂತೆಯೇ ಕಂಪನಗಳನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುತ್ತದೆ. ಮಾನವನ ಕಿವಿಯ ಆರಿಕಲ್ ನಿಂದ ಸ್ಫೂರ್ತಿ ಪಡೆದು ಸಂಶೋಧಕರು ಈ ಉಡುಪನ್ನು ತಯಾರಿಸಿದ್ದಾರೆ. ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್ ಸಹಯೋಗದೊಂದಿಗೆ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು. ಈ ಅಧ್ಯಯನವನ್ನು ನ್ಯಾಚುರಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...