alex Certify ಆಳ ಸಮುದ್ರದಲ್ಲಿ ಏಲಿಯನ್​ ತರಹದ ಜೀವಿ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಳ ಸಮುದ್ರದಲ್ಲಿ ಏಲಿಯನ್​ ತರಹದ ಜೀವಿ ಪತ್ತೆ….!

ನಮ್ಮ ಸಾಗರಗಳು ನಿಗೂಢ ಜೀವಿಗಳಿಂದ ತುಂಬಿವೆ, ಇದರಲ್ಲಿ ಎರಡು ಮಾತಿಲ್ಲ. ಇಲ್ಲಿಯವರೆಗೆ ಹಲವು ವರ್ಷಗಳ ಸಂಶೋಧನೆ ಮತ್ತು ಆವಿಷ್ಕಾರದ ನಂತರ ಜಲಚರಗಳ ಅತ್ಯಂತ ಸಣ್ಣ ಭಾಗ ಮಾತ್ರ ನಮಗೆ ತಿಳಿದಿದೆ. ಆಗಿಂದಾಗ್ಗೆ ಹೊಸ ಜೀವಿಗಳ ಪತ್ತೆಯಾಗುತ್ತಲೇ ಇದೆ.

ಇತ್ತೀಚೆಗೆ, ವಿಜ್ಞಾನಿಗಳು ಸಮುದ್ರದ ಆಳದಿಂದ ವಿಚಿತ್ರ ಜೀವಿಯನ್ನು ಪತ್ತೆ ಹಚ್ಚಿದ್ದಾರೆ. ಅದು ಹಲವಾರು ಕಾಲುಗಳನ್ನು ಹೊಂದಿದ್ದು, ಅವು ನಮ್ಮ ಗಾರ್ಡನ್​ಗಳಲ್ಲಿ ಕಂಡುಬರುವ ಕೀಟಗಳಂತೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ಅದರ ರಚನೆಯು ತುಂಬಾ ವಿಭಿನ್ನವಾಗಿದ್ದು, ವಿಜ್ಞಾನಿಗಳು ಇದನ್ನು “ಡಾರ್ತ್​ ವಾಡರ್” ಎಂದು ಹೆಸರಿಸಿದ್ದಾರೆ.

ಸಾಂಪ್ರದಾಯಿಕ ಖಳನಾಯಕನ ಶಿರಸ್ತ್ರಾಣ ಹೋಲುವ ಕಾರಣದಿಂದ ಬ್ಯಾಥಿನೋಮಸ್​ ತಳಿ ಸಮುದ್ರಗಳ ಡಾರ್ತ್​ ವಾಡೆರ್​ ಎಂದು ಕರೆಯಲಾಗುತ್ತದೆ. ಇದು ಮಿಳಿತಗೊಂಡ ಕಣ್ಣುಗಳು, ಏಳು ಭಾಗ ಹೊಂದಿರುವ ದೇಹ, ಎರಡು ಜೋಡಿ ಆಂಟೆನಾ ರೀತಿಯ ಸಣ್ಣ ಕೋಡು, ನಾಲ್ಕು ಸೆಟ್​ ದವಡೆಗಳನ್ನು ಹೊಂದಿದೆ.

ಆಳವಾದ ಸಮುದ್ರದಲ್ಲಿ ಕಾಣಿಸುವ ಈ ಪ್ರಭೇದಗಳು 30 ಸೆಂ.ಮೀ ಗಿಂತ ಹೆಚ್ಚು ಬೆಳೆಯುತ್ತವೆ. ಸಾಮಾನ್ಯವಾಗಿ ಸಮುದ್ರದ 950 ಮತ್ತು 1,260 ಮೀಟರ್​ಗಳ ನಡುವೆ ಇರುತ್ತದೆ.

ಈ ಐಸೋಪಾಡ್​ನ ವೈಜ್ಞಾನಿಕ ಹೆಸರು ಬ್ಯಾಥಿನೋಮಸ್​ ಯುಕಾಟಾನೆನ್ಸಿಸ್​. ಇದು ಮೊದಲು ಗಲ್ಫ್​ ಆಫ್​ ಮೆಕ್ಸಿಕೊದಲ್ಲಿ ಕಾಣಿಸಿದೆ. ಇದರ ದೇಹದ ಚರ್ಮವು ಗಟ್ಟಿಯಾಗಿರುತ್ತದೆ ಮತ್ತು ತಿಳಿ ಹಳದಿ ಬಣ್ಣವನ್ನು ಹೊಂದಿದ್ದು, ಬೆನ್ನುಮೂಳೆಯು ಅದರ ಬಾಲದಿಂದ ಚಾಚಿಕೊಂಡಿರುವುದನ್ನು ಕಾಣಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...