alex Certify BIG NEWS: ರಕ್ತಸ್ರಾವ ತಡೆಗಟ್ಟಲು ವಿಶೇಷ ಅಂಟು ತಯಾರಿಸಿದ ವಿಜ್ಞಾನಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಕ್ತಸ್ರಾವ ತಡೆಗಟ್ಟಲು ವಿಶೇಷ ಅಂಟು ತಯಾರಿಸಿದ ವಿಜ್ಞಾನಿಗಳು…!

ರಕ್ತಸ್ರಾವದಿಂದ ಸಾವನ್ನಪ್ಪುವ ಸಾಕಷ್ಟು ಪ್ರಕರಣಗಳನ್ನ ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ರಕ್ತಸ್ರಾವಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣವೇ ಚಿಕಿತ್ಸೆ ಸಿಗದೇ ಹೋದಲ್ಲಿ ಆ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಕೂಡ ಇರುತ್ತದೆ. ಆದರೆ ಈ ಸಮಸ್ಯೆಗೆ ಕೆನಡಾದ ವೆಸ್ಟರ್ನ್​ ಯೂನಿವರ್ಸಿಟಿಯ ವಿಜ್ಞಾನಿಗಳು ಪರಿಹಾರವೊಂದನ್ನ ಕಂಡು ಹಿಡಿದಿದ್ದಾರೆ.

ಕೆನಡಾದ ವಿಜ್ಞಾನಿಗಳು ವಿಶೇಷವಾದ ಅಂಟೊದನ್ನ ಪತ್ತೆ ಮಾಡಿದ್ದು ಈ ಅಂಟನ್ನ ರಕ್ತಸ್ರಾವವಾಗುತ್ತಿರುವ ಜಾಗಕ್ಕೆ ಲೇಪಿಸಿದಲ್ಲಿ ಕೂಡಲೇ ರಕ್ತ ಸ್ರಾವ ನಿಲ್ಲಲಿದೆ.

ಶಾಲೆಗಳ ಪುನರಾರಂಭ; ಸುಳಿವು ನೀಡಿದ ಸುರೇಶ್ ಕುಮಾರ್

ಅಂದಹಾಗೆ ಈ ವಿಶೇಷ ಅಂಟನ್ನ ಲ್ಯಾನ್ಸ್​ಹೆಡ್​ ಎಂಬ ಹಾವುಗಳಲ್ಲಿ ಕಂಡುಬರುವ ವಿಷದಿಂದ ತಯಾರಿಸಲಾಗಿದೆ. ರಕ್ತ ಸ್ರಾವ ತಡೆಯಲು ಬೇಕಾದ ಎಂಜೈಮ್​ನ್ನು ಬ್ಯಾಟ್ರೋಕ್ಸೊಬಿನ್​ ಎಂದು ಕರೆಯಲಾಗುತ್ತದೆ. ಈ ಎಂಜೈಮ್​ನ್ನು ಜೆಲಾಟಿನ್​ ಜೊತೆ ಸೇರಿಸಲಾಗುತ್ತದೆ. ಈ ವಿಶೇಷವಾದ ಅಂಟನ್ನ ಅಪಘಾತವಾದ ಸಂದರ್ಭದಲ್ಲಿ ಉಂಟಾಗುವ ವಿಪರೀತ ರಕ್ತಸ್ರಾವಗಳನ್ನ ತಡೆಯಲು ಬಳಕೆ ಮಾಡಬಹುದಾಗಿದೆ.

ಲ್ಯಾನ್ಸ್​ಹೆಡ್​ ಹಾವುಗಳು ಹೆಚ್ಚಾಗಿ ದಕ್ಷಿಣ ಅಮೆರಿಕ ಉತ್ತರ ಭಾಗಗಳಲ್ಲಿ ಕಂಡುಬರುತ್ತದೆ. ಇವುಗಳು 30ರಿಂದ 50 ಇಂಚುಗಳವರೆಗೆ ಬೆಳೆಯಬಲ್ಲವು. ಇವುಗಳು ಸಾಮಾನ್ಯವಾಗಿ ಬಾಳೆಹಣ್ಣು ಹಾಗೂ ಕಾಫಿ ತೋಟಗಳಲ್ಲಿ ಕಂಡುಬರುತ್ತವೆ. ಕಣ್ಣಿಗೆ ಕಾಣಿಸದಂತೆ ಇರುವ ಈ ಹಾವುಗಳು ತೋಟದ ಕೆಲಸಗಾರರನ್ನ ಕಚ್ಚುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...