alex Certify ಹಣ್ಣುಗಳ ಸಂರಕ್ಷಣೆಗೆ ವಿಶೇಷ ಹಾಳೆ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣುಗಳ ಸಂರಕ್ಷಣೆಗೆ ವಿಶೇಷ ಹಾಳೆ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು

Scientists Create Carbon-Based Reusable Paper to Increase Shelf-Life of Fruits

ಬಹಳ ಬೇಗ ಹಾಳಾಗುವ ಉತ್ಪನ್ನಗಳಾದ ಹಣ್ಣುಗಳನ್ನು ಸಂರಕ್ಷಿಸಿಡಲು ಏನೆಲ್ಲಾ ಕಸರತ್ತುಗಳನ್ನು ಮಾಡಿದರೂ ಉತ್ಪಾದನೆ ಮಾಡಿದ 50%ದಷ್ಟು ಹಣ್ಣುಗಳು ವ್ಯರ್ಥವಾಗುತ್ತವೆ. ಸದ್ಯಕ್ಕೆ ಹಣ್ಣುಗಳನ್ನು ರೆಸಿನ್, ಮೇಣ, ಪಾಲಿಮರ್‌ಗಳಂಥ ವಸ್ತುಗಳಿಂದ ಕೋಟಿಂಗ್ ಮಾಡಿ ಸಂರಕ್ಷಣೆ ಮಾಡಿದರೂ ಸಹ ಅವುಗಳಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಇದಕ್ಕೊಂದು ಪರಿಹಾರ ಕಂಡುಕೊಂಡಿರುವ ಭಾರತೀಯ ವಿಜ್ಞಾನಿಗಳು ಕಾರ್ಬನ್‌ (ಗ್ರಾಫೀನ್ ಆಕ್ಸೈಡ್) ಬಳಸಿ ಸಂರಕ್ಷಕಗಳನ್ನು ಲೋಡ್ ಮಾಡಲಾದ ಕಾಗದದ ಹಾಳೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹಾಳೆಗಳು ಅಗತ್ಯವಿದ್ದಾಗ ಮಾತ್ರವೇ ಸಂರಕ್ಷಕಗಳ ಬಿಡುಗಡೆ ಮಾಡುವ ಕಾರಣದಿದ ಆರೋಗ್ಯದ ಮೇಲೆ ಸಾಂಪ್ರದಾಯಿಕ ಸಂರಕ್ಷಕಗಳಷ್ಟು ಹಾನಿ ಮಾಡುವುದಿಲ್ಲ.

ದೆಹಲಿ: ಗರ್ಲ್‌ಫ್ರೆಂಡ್ ಕೊಂದು ದೇಹವನ್ನು ಕಾಡಿನಲ್ಲಿ ಬಿಟ್ಟ ಪ್ರಿಯಕರ

ಮೊಹಾಲಿಯ ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಂಶೋಧಕರಾದ ಡಾ. ಪಿ.ಎಸ್ ವಿಜಯ್ ಕುಮಾರ್‌ ನೇತೃತ್ವದಲ್ಲಿ ಸಂಶೋಧಕರ ತಂಡವೊಂದು ಈ ಸಂಬಂಧ ಸಂಶೋಧನೆ ಹಾಗೂ ಅಭಿವೃದ್ಧಿ ಮಾಡಿದೆ.

ಈ ಹಾಳೆಗಳಲ್ಲಿ ಲೊಡ್ ಮಾಡಲಾದ ಸಂರಕ್ಷಕಗಳು, ಒಳಗಿರುವ ಹಣ್ಣುಗಳು ಕೊಳೆಯಲು ಆರಂಭಿಸಿದಾಗ ಕ್ಷಾರದಂಶ ಹೆಚ್ಚಾಗಿ ಬಿಡುಗಡೆ ಮಾಡಿದ ಸಂದರ್ಭಲ್ಲಿ ಬಿಡುಗಡೆಯಾಗುತ್ತವೆ. ಇಲ್ಲವಾದಲ್ಲಿ ಕಾರ್ಬನ್ ಪೇಪರ್‌ಗೆ ಅಂಟಿರುವ ಸಂರಕ್ಷಕಗಳು ಹಾಗೆಯೇ ಉಳಿಯುತ್ತವೆ. ಈ ಹಾಳೆಗಳನ್ನು ಮತ್ತೆ ಮತ್ತೆ ಬಳಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: