ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದೆ. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಜೀವನವನ್ನು ಸಾಮಾನ್ಯಗೊಳಿಸುವ ಪ್ರಯತ್ನದಲ್ಲಿದೆ. ರಾಜ್ಯದಲ್ಲಿ ಸೋಮವಾರದಿಂದ ಮಾಧ್ಯಮಿಕ ಶಾಲೆ, ಕೋವಿಡ್ ಪ್ರೋಟೋಕಾಲ್‌ನೊಂದಿಗೆ ತೆರೆದಿವೆ. ಈಗ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಸಿದ್ಧತೆ ನಡೆದಿದೆ.
ಸೋಮವಾರ, ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ರಕ್ಷಾ ಬಂಧನದ ನಂತ್ರ ಆರರಿಂದ ಎಂಟನೇ ತರಗತಿಯ ಶಾಲೆಗಳನ್ನು ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಸೆಪ್ಟೆಂಬರ್ 1ರಿಂದ ಒಂದರಿಂದ ಐದನೇ ತರಗತಿ ಶಾಲೆಗಳು ಶುರುವಾಗಲಿವೆ. ಎಲ್ಲ ಶಾಲೆಗಳು ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
ಸೋಮವಾರದಿಂದ ಮಾಧ್ಯಮಿಕ, ಉನ್ನತ, ತಾಂತ್ರಿಕ ವೃತ್ತಿಪರ ಶಿಕ್ಷಣ ಸಂಸ್ಥೆಯ ಬಾಗಿಲು ತೆರೆದಿದೆ. ಶೇಕಡ 50ರಷ್ಟು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಎರಡು ಪಾಳಿಯಲ್ಲಿ ತರಗತಿ ನಡೆಯುತ್ತಿದೆ.