1960 ರ ದಶಕದ ಶಾಲಾ ವಿದ್ಯಾರ್ಥಿನಿಯ ಪತ್ರವೊಂದು ಇದೀಗ ಬಹಿರಂಗಗೊಂಡಿದೆ. ಇದು ಕೆಲವು ಭಯಾನಕ ನಿಖರವಾದ ಮುನ್ಸೂಚನೆಗಳನ್ನು ಒಳಗೊಂಡಿದೆ. 50 ವರ್ಷಗಳ ಹಿಂದೆ ಬರೆದ ಪತ್ರದಲ್ಲಿ ಭವಿಷ್ಯದಲ್ಲಿ ಜೀವನ ಹೇಗಿರುತ್ತದೆ ಎಂದು ಊಹಿಸಿದ್ದಾಳೆ. ಈ ಪತ್ರವನ್ನು ಇತ್ತೀಚೆಗೆ ಕೇಂಬ್ರಿಡ್ಜ್‌ಶೈರ್‌ನಿಂದ ರೋಸಾ ಬೆಕರ್ಟನ್ ಮತ್ತು ಅವರ ಪತಿ ಪೀಟರ್ ಅವರು ಕಂಡುಹಿಡಿದಿದ್ದಾರೆ.
ಹೌದು, 1969ರಲ್ಲಿ 11 ವರ್ಷದ ಬಾಲಕಿಯೊಬ್ಬಳು 1980ರಲ್ಲಿ ಜೀವನ ಹೇಗಿರಬಹುದೆಂದು ಆಲೋಚಿಸುತ್ತಾ ಬರೆದಿದ್ದಾಳೆ. ಈ ಪತ್ರವು 23 ಫೆಬ್ರವರಿ 1969ರ ದಿನಾಂಕದ್ದಾಗಿದೆ. ವರ್ಷ 1980, ಸಮಯ ಅರ್ಧ ಕಳೆದ ಚಂದ್ರನ ಧೂಳು. ಇಲ್ಲಿ ತನಗೆ ಇಪ್ಪತ್ತೊಂದು ವರ್ಷ. ತಾನು 11 ವರ್ಷ ವಯಸ್ಸಿನವಳಾಗಿದ್ದಾಗ ಮತ್ತು ತಾನು ಶಾಲೆಯಲ್ಲಿದ್ದಾಗ ಈಗಲೂ ನೆನಪಿದೆ, ಅಂದಿನಿಂದ ಎಲ್ಲವೂ ಬದಲಾಗಿದೆ. ಉದಾಹರಣೆಗೆ, ದೂರದರ್ಶನ ಬದಲಾಗಿದೆ. 1969 ರಲ್ಲಿ ಅದು ಚೌಕಾಕಾರದ ಪೆಟ್ಟಿಗೆಯಾಗಿದ್ದು, ಅದರ ಮುಂದೆ ಬಟನ್ ಗಳನ್ನು ಹೊಂದಿತ್ತು. ಈಗ ಅದನ್ನು ಆನ್ ಮತ್ತು ಆಫ್ ಮಾಡಲು ಗೋಡೆಯಲ್ಲಿ ಸ್ವಿಚ್ ಗಳನ್ನು ಹೊಂದಿರುವ ದೊಡ್ಡ ಪರದೆಯಾಗಿದೆ. ತಾನು ಮದುವೆಯಾಗಿದ್ದೇನೆ ಮತ್ತು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತೇನೆ. ಹಣದೊಂದಿಗೆ ವ್ಯವಹರಿಸುತ್ತೇನೆ. ತಾನು ಯಾವಾಗಲೂ ಬ್ಯಾಂಕ್ ಸಹಾಯಕಳಾಗಲು ಬಯಸುತ್ತೇನೆ ಎಂದು ಬರೆದಿದ್ದಾಳೆ.
ಇನ್ನು ಮುಂದುವರೆಸಿದ ಶಾಲಾ ವಿದ್ಯಾರ್ಥಿನಿಯು, ತನ್ನ ಪತಿ ಕೆಲಸದಿಂದ ಹೇಗೆ ಮನೆಗೆ ಬರುತ್ತಾನೆ ಎಂಬುದನ್ನು ತಿಳಿಸಿದ್ದಾಳೆ. ನಮ್ಮ ಮನೆಯ ಬಾಗಿಲುಗಳು ವಿದ್ಯುತ್ ಬಾಗಿಲುಗಳಾಗಿವೆ ಎಂದು ಕೂಡ ತಿಳಿಸಿದ್ದಾಳೆ.
ಈ ಪತ್ರವು ಬಹಳ ಆಸಕ್ತಿದಾಯಕವಾಗಿದೆ. ಏಕೆಂದರೆ ಇಂದು ಆ ಪತ್ರವನ್ನು ಓದುವಾಗ ಬಾಲಕಿ ಭವಿಷ್ಯವಾಣಿಯನ್ನು ಸರಿಯಾಗಿ ನುಡಿದಿದ್ದಾಳೆ ಎಂದೆನಿಸುತ್ತದೆ. ಆದರೆ, ಆಕೆಯ ಮುಗ್ಧತೆಯಲ್ಲಿ ಅದು ಹತ್ತು ವರ್ಷಗಳಲ್ಲಿ ಸಂಭವಿಸುತ್ತದೆ ಎಂದೇ ಆಕೆ ಭಾವಿಸಿದ್ದಳು.