ಬೆಂಗಳೂರು: ಕೊರೋನಾ ಕಾರಣದಿಂದಾಗಿ ಈ ಶೈಕ್ಷಣಿಕ ಸಾಲಿನಲ್ಲಿ ಶಾಲೆ-ಕಾಲೇಜುಗಳು ನಡೆದಿಲ್ಲ. ಇತ್ತೀಚೆಗಷ್ಟೇ ಶಾಲೆ, ಕಾಲೇಜ್ ಆರಂಭವಾಗಿದ್ದು, ಈ ಬಾರಿ ಎಲ್ಲರಿಗೂ ಪರೀಕ್ಷೆ ನಡೆಸಲಾಗುವುದು.
ವಾರ್ಷಿಕ ಪರೀಕ್ಷೆಗೆ ಕನಿಷ್ಠ ಹಾಜರಾತಿ ಇಲ್ಲದಿದ್ದರೂ ಅವಕಾಶ ನೀಡಲಾಗುತ್ತದೆ. ಎಸ್ಎಸ್ಎಲ್ಸಿ, ಸೆಕೆಂಡ್ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸುಗಳ ವಾರ್ಷಿಕ, ಸೆಮಿಸ್ಟರ್ ಪರೀಕ್ಷೆ ಬರೆಯಲು ನಿಗದಿಪಡಿಸಿದ ಹಾಜರಾತಿ ಇಲ್ಲದಿದ್ದರೂ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.
ವಾರ್ಷಿಕ ಪರೀಕ್ಷೆಗಳನ್ನು ಕನಿಷ್ಠ ಹಾಜರಾತಿ ಇಲ್ಲದೆ ಬರೆಯಲು ಅವಕಾಶ ನೀಡಲಾಗುವುದು. ನಿಯಮದ ಪ್ರಕಾರ ಶೇಕಡಾ 70 ಮತ್ತು ಶೇಕಡ 75 ಕ್ಕಿಂತ ಹೆಚ್ಚಿನ ಹಾಜರಾತಿ ಕಡ್ಡಾಯವಾಗಿರಬೇಕು. ಹಾಜರಾತಿ ಕೊರತೆಯಿಂದಲೇ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ.
ಈಗ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳು ನಡೆಯುತ್ತಿದ್ದು ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲಾಗುತ್ತಿದೆ. ನಿಗದಿಪಡಿಸಿದ ಕನಿಷ್ಠ ಹಾಜರಾತಿ ಇಲ್ಲದಿದ್ದರೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಈಗಾಗಲೇ ಶಾಲೆ, ಕಾಲೇಜ್ ಆರಂಭವಾಗಿದ್ದು, ಪರೀಕ್ಷೆಗೂ ಸಮಯ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗ್ತಿದೆ ಎನ್ನಲಾಗಿದೆ.