ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅಡಿ ಸೀಟು ಹಂಚಿಕೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. 2021 – 22 ನೇ ಸಾಲಿನ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಅರ್ಜಿ ಸ್ವೀಕರಿಸಿದ್ದು, ಸೀಟು ಹಂಚಿಕೆ ಪ್ರಕ್ರಿಯೆ ಪ್ರವೇಶಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.
RTE ಅಡಿ ಪ್ರವೇಶಕ್ಕಾಗಿ ಸ್ವೀಕರಿಸಲಾದ ಅರ್ಜಿ ಪರಿಶೀಲನೆ ನಡೆಸಿ ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಜೂನ್ 22 ರಂದು ಆನ್ಲೈನ್ ಮೂಲಕ ಸೀಟು ಹಂಚಿಕೆ ಪ್ರಕಟಿಸಲಾಗುತ್ತದೆ. ಸೀಟು ದೊರೆತ ಮಕ್ಕಳನ್ನು ಜೂನ್ 25 ರಿಂದ ಜುಲೈ 9 ರೊಳಗೆ ಆಯಾ ಶಾಲೆಗಳಲ್ಲಿ ದಾಖಲಾತಿ ಮಾಡಿಸಬೇಕಿದೆ.
ಜೂನ್ 14 ರಂದು ಎರಡನೇ ಸುತ್ತಿನ ಸೀಟು ಹಂಚಿಕೆ ಆನ್ಲೈನ್ನಲ್ಲಿ ಪ್ರಕಟವಾಗಲಿದ್ದು, ಜುಲೈ 16 ರಿಂದ 26 ರವರೆಗೆ ಮಕ್ಕಳನ್ನು ಶಾಲೆಗಳಿಗೆ ಪ್ರವೇಶಾತಿ ಮಾಡಿಸಬೇಕು. ಜುಲೈ 26 ರೊಳಗೆ ಮಕ್ಕಳ ವಿವರ ತಂತ್ರಾಂಶದಲ್ಲಿ ಅಳವಡಿಸಬೇಕಿದೆ ಎಂದು ಹೇಳಲಾಗಿದೆ.