ಬೆಂಗಳೂರು: ದೀಪಾವಳಿ ಮುಗಿದ 15 ದಿನಗಳ ನಂತರ ಶಾಲೆ ಪುನಾರಂಭಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಹಬ್ಬದ ನಂತರವೇ ಸಿಎಂ ಯಡಿಯೂರಪ್ಪ ಶಾಲೆ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
9 ರಿಂದ 12 ನೇ ತರಗತಿವರೆಗೆ ಶಾಲೆ, ಪಿಯು ಕಾಲೇಜ್ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗುವುದು. ಡಿಸೆಂಬರ್ ಮೊದಲ ವಾರದಲ್ಲಿ ಶಾಲೆ ಆರಂಭ ಬಹುತೇಕ ಫಿಕ್ಸ್ ಆಗಿದೆ. ಹಬ್ಬದ ಸಮಯದಲ್ಲಿ ಶಾಲೆ ಆರಂಭಿಸದಂತೆ ತಜ್ಞರು ಸಲಹೆ ನೀಡಿದ್ದಾರೆ. ತಜ್ಞರ ಸಲಹೆಯಂತೆ ದೀಪಾವಳಿ ಮುಗಿದ 15 ದಿನಗಳ ನಂತರ ಶಾಲೆ ಆರಂಭಿಸಲಾಗುವುದು. ಸಿಎಂ ಯಡಿಯೂರಪ್ಪ ಹಬ್ಬದ ನಂತರ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಶಾಲೆಗಳ ಪುನಾರಂಭದ ಕುರಿತಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಶಂಕರ್ ಅವರಿಗೆ ವರದಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.