ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭ ಸೂಕ್ತವೆಂಬ ಸಲಹೆ ಕೇಳಿ ಬಂದಿದೆ.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭಿಸುವುದು ಸೂಕ್ತವೆಂದು ಕಾರ್ಯಪಡೆ ಸಲಹೆ ನೀಡಿದೆ. ಸುರಕ್ಷತೆ ಕ್ರಮಗಳೊಂದಿಗೆ ಶಾಲೆಗಳನ್ನು ಪ್ರಾರಂಭಿಸಬಹುದು ಎಂದು 17 ಅಂಶಗಳನ್ನೊಳಗೊಂಡ ಮಧ್ಯಂತರ ವರದಿಯನ್ನು ತಜ್ಞರ ಕಾರ್ಯಪಡೆ ಸರ್ಕಾರಕ್ಕೆ ಸಲ್ಲಿಸಿದೆ.
ದೀರ್ಘಾವಧಿ ಶಾಲೆಗೆ ಮಕ್ಕಳು ಹೋಗಲು ಸಾಧ್ಯವಾಗದಿದ್ದರೆ ಶೈಕ್ಷಣಿಕವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ ಅವರ ಭವಿಷ್ಯದ ಹಿತದೃಷ್ಟಿಯಿಂದ ಸುರಕ್ಷತೆ ಕ್ರಮಗಳೊಂದಿಗೆ ಶಾಲೆ ಆರಂಭಿಸಬಹುದು. ಸೋಂಕಿನ ಪ್ರಮಾಣ ಹೆಚ್ಚಿರುವ ಲಕ್ಷಣ ಕಂಡಲ್ಲಿ ತಾತ್ಕಾಲಿಕವಾಗಿ ಶಾಲೆ ಮುಚ್ಚಬಹುದು ಎಂದು ಹೇಳಲಾಗಿದೆ.