ಬೆಂಗಳೂರು: ಶುಲ್ಕ ಕಡಿತ ಸಂಬಂಧಿತ ಹೋರಾಟದಿಂದ ರುಪ್ಸಾ ಸಂಘಟನೆ ಹಿಂದೆ ಸರಿದಿದ್ದು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.
ಶೇಕಡ 30 ರಷ್ಟು ಶುಲ್ಕ ಕಡಿತ ಬಗ್ಗೆ ಯಾವುದೇ ತಕರಾರು ಇಲ್ಲ. ಹೀಗಾಗಿ ಫೆಬ್ರವರಿ 23 ರಂದು ಕರೆಕೊಟ್ಟಿರುವ ಖಾಸಗಿ ಶಾಲೆಗಳ ಜಂಟಿ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಲೋಕೇಶ್ ತಾಳಿಕೋಟೆ ಸ್ಪಷ್ಟನೆ ನೀಡಿದ್ದಾರೆ.
ಶುಲ್ಕ ಕಡಿತ ಸಂಬಂಧ ಹೋರಾಟದಿಂದ ಸಂಘಟನೆ ಹಿಂದೆ ಸರಿದಿದೆ. ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿದೆ. ಸಂಘಟನೆಯ ಅಡಿಯಲ್ಲಿ 13 ಸಾವಿರಕ್ಕೂ ಹೆಚ್ಚು ಬಜೆಟ್ ಶಾಲೆಗಳಿವೆ ಎಂದು ಹೇಳಲಾಗಿದೆ.