alex Certify BIG NEWS: 5 ಜಿಲ್ಲೆ ಹೊರತುಪಡಿಸಿ ರಾಜ್ಯದಲ್ಲಿ ನಾಳೆಯಿಂದ ಶಾಲಾ, ಕಾಲೇಜು ಆರಂಭ -ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 5 ಜಿಲ್ಲೆ ಹೊರತುಪಡಿಸಿ ರಾಜ್ಯದಲ್ಲಿ ನಾಳೆಯಿಂದ ಶಾಲಾ, ಕಾಲೇಜು ಆರಂಭ -ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ಸೋಮವಾರದಿಂದ 9 ರಿಂದ 12 ನೇ ತರಗತಿಗಳಲ್ಲಿ ಭೌತಿಕ ಪಾಠ ಪ್ರಾರಂಭವಾಗಲಿದೆ. ಇದಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ಮತ್ತು 10 ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ.

9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗಿನ ವೇಳೆ ಅರ್ಧ ದಿನ ಮಾತ್ರ ಭೌತಿಕ ತರಗತಿ ನಡೆಯಲಿವೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ, ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.50 ರವರೆಗೆ ತರಗತಿಗಳು ನಡೆಯಲಿವೆ.

ವಿದ್ಯಾರ್ಥಿಗಳು ಮತ್ತು ಕೊಠಡಿಯ ಲಭ್ಯತೆ ನೋಡಿಕೊಂಡು 15 ರಿಂದ 20 ಜನರ ತಂಡ ಮಾಡಿ ಭೌತಿಕ ತರಗತಿ ನಡೆಸಲು ತಿಳಿಸಲಾಗಿದೆ.

ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ದಿನ ಆಫ್ಲೈನ್ ಕ್ಲಾಸ್ ಗಳು ಮತ್ತು ಮೂರು ದಿನ ಆನ್ಲೈನ್ ಕ್ಲಾಸ್ ಗಳು ನಡೆಯಲಿವೆ. ಶೇಕಡ 50 ರಷ್ಟು ವಿದ್ಯಾರ್ಥಿಗಳು ಸೋಮವಾರ, ಮಂಗಳವಾರ, ಬುಧವಾರ ತರಗತಿಗೆ ಹಾಜರಾಗಬೇಕಿದೆ. ಉಳಿದ ವಿದ್ಯಾರ್ಥಿಗಳು ಗುರುವಾರ, ಶುಕ್ರವಾರ, ಶನಿವಾರ ಕಾಲೇಜಿಗೆ ಬರಬೇಕಿದ್ದು, ಉಳಿದ ಮೂರು ದಿನ ಆನ್ಲೈನ್ ತರಗತಿ ನಡೆಯಲಿವೆ

ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾಗಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kviečiame pasinerti į įdomų pasaulį, kuris pilnas kasdienių patarimų, virtuvės triukų ir naudingų straipsnių apie daržą. Sužinokite, kaip lengvai ir greitai pasiruošti skaniu patiekalu, arba pasidalinkite savo patirtimi kaip geriausiai prižiūrėti savo daržą. Su mūsų patarimais jūsų gyvenimas taps dar įdomesnis! Kaip sutaupyti pinigų ant komunalinių paslaugų: Zamiokulkų dauginimo paslaptys: unikalus triukas, apie kurį Patalynės priežiūra: faktoriai, įtakojantys skalbimo 5 patarimai, kaip nušluoti namus taip, kad nešalintumėte sėkmės Sodininkai nurimto muilo prie paukščių lesyklų: kas pribloškė priežastis Surask 2 skirtumus tarp paveikslėlių per 5 sekundes: Kaip kepti bulves Neradus rauginimo medžiagos, mėginkite kitą Patyrusios šeimininkės paslaptis: Naujas keliavimo trendas greitai įgauna populiarumą tarp moterų Geriausios kopūstų veislės, kurias būtinai Greitai ir lengvai: Genijaus sprendimas: greičiausias būdas nustatyti skirtumą Įdomios gyvenimo gudrybės, virtuvės patarimai ir naudingos straipsniai apie daržą" - tai svetainė, kurioje rasite gausybę naudingos informacijos. Mes dalinamės su jumis visais svarbiais patarimais, kurie padės jums pagerinti savo gyvenimo kokybę ir sužinoti daugiau apie sveiką gyvenseną. Be to, čia rasite skanių receptų, kurie praturtins jūsų virtuvę, ir patarimų, kaip sėkmingai auginti savo daržą. Užsukite į mūsų svetainę ir atraskite naujus būdus, kaip palengvinti savo gyvenimą!