ಬೆಂಗಳೂರು: ಏಕಾಏಕಿ ರಾಜ್ಯಾದ್ಯಂತ ಶಾಲೆಗಳನ್ನು ಆರಂಭಿಸಬಾರದು. ಸ್ಥಳೀಯ ಸಂಸ್ಥೆಗಳಿಗೆ ನಿರ್ಧಾರ ಕೈಗೊಳ್ಳಲು ಅಧಿಕಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ತಜ್ಞರ ಸಮಿತಿ ವರದಿ ನೀಡಿದೆ.
ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ಮೂರನೇ ಅಲೆಯ ಸಿದ್ಧತೆ ಕುರಿತು ರಚಿಸಲಾದ ಉನ್ನತಮಟ್ಟದ ತಜ್ಞರ ಸಮಿತಿ ಮಧ್ಯಂತರ ವರದಿ ಸಲ್ಲಿಸಿದ್ದು, ಮಕ್ಕಳಿಗೆ ಶಾಲೆ ಪುನಾರಂಭದಿಂದ ಉಪಯೋಗ, ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಪರಿಶೀಲನೆ ನಂತರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ,
ಶಾಲೆ ಆರಂಭಿಸುವ ಬಗ್ಗೆ ಸ್ಥಳೀಯ ಸಂಸ್ಥೆಗಳು ನಿರ್ಧಾರ ಕೈಗೊಳ್ಳಲಿ. ಮೊದಲಿಗೆ ಶಾಲೆಯ ಶಿಕ್ಷಕರು, ಪೋಷಕರಿಗೆ ಲಸಿಕೆ ನೀಡಬೇಕು. ಶಾಲಾ ಸಿಬ್ಬಂದಿ, ಬಸ್ ಚಾಲಕರಿಗೆ ಲಸಿಕೆ ನೀಡುವ ಜೊತೆಗೆ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಬೇಕು. ಆಯಾ ಪ್ರದೇಶದ ಸುರಕ್ಷತೆ ಆಧರಿಸಿ ಶಾಲೆ ಆರಂಭಿಸುವ ಬಗ್ಗೆ ನಿರ್ಧರಿಸಬೇಕು. ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನಲಾಗಿದೆ.