ಬೆಂಗಳೂರು: ರಾಜ್ಯದಲ್ಲಿ ಪಾಸಿಟಿವಿಟಿದ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ರಿಂದ 12 ನೇ ತರಗತಿ ಆರಂಭಿಸಲಾಗಿದ್ದು, ಸೋಂಕು ಏರಿಕೆಯಾಗಿಲ್ಲ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಪ್ರಮುಖರ ಸಭೆ ನಡೆಯಲಿದ್ದು, ಸಭೆಯಲ್ಲಿ ಆರರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ನಂತರದ ಪರಿಸ್ಥಿತಿಯನ್ನಾಧರಿಸಿ ಒಂದರಿಂದ ಐದನೇ ತರಗತಿ ಆರಂಭಿಸಲಾಗುವುದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿನ ಸಭೆಯ ನಂತರ ಆರರಿಂದ ಎಂಟನೇ ತರಗತಿಯ ಆರಂಭಿಸುವ ಕುರಿತು ಮಾಹಿತಿ ನೀಡುವ ಸಾಧ್ಯತೆ ಇದೆ. ಶಾಲೆಗಳನ್ನು ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಮಕ್ಕಳು, ಶಿಕ್ಷಕರು, ಪೋಷಕರು ಶಾಲೆಯ ಆರಂಭಕ್ಕೆ ಮನವಿ ಮಾಡಿದ್ದಾರೆ. ಈಗಾಗಲೇ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಶಾಲೆಗಳು ನಡೆಯುತ್ತಿದೆ. ಶಾಲೆ ಆರಂಭವಾದ ನಂತರದ ಕೊರೋನಾ ಪರಿಸ್ಥಿತಿ ಅವಲೋಕನ ನಡೆಸಿ 6 ರಿಂದ 8 ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಬಹುದೆಂದು ಹೇಳಲಾಗಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಸುಳಿವು ನೀಡಿದ್ದಾರೆ.