ಬೆಂಗಳೂರು: ಗುರುವಾರದಿಂದ ರಾಜ್ಯದಲ್ಲಿ 6 -10 ನೇ ತರಗತಿ, ಬಿಸಿಯೂಟ ಯೋಜನೆ ಪುನಾರಂಭವಾಗಲಿವೆ. ನಿನ್ನೆಗೆ ದಸರಾ ರಜೆ ಮುಗಿದಿದ್ದು, 6 ರಿಂದ 10ನೇ ತರಗತಿ ಮಕ್ಕಳಿಗೆ ಮತ್ತೆ ಭೌತಿಕ ತರಗತಿ ಇಂದಿನಿಂದ ಆರಂಭವಾಗಲಿದೆ.
ಶಾಲೆ ಪುನಾರಂಭದ ಜೊತೆಗೆ ಇಂದಿನಿಂದ ಮಧ್ಯಾಹ್ನ ಬಿಸಿಯೂಟ ಯೋಜನೆ ಕೂಡ ಆರಂಭವಾಗಲಿದೆ. ಅಕ್ಟೋಬರ್ 10 ರಿಂದ 20 ರವರೆಗೆ ನೀಡಲಾಗಿದ್ದ ಮಧ್ಯಂತರ ರಜೆ ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಶಾಲಾ ಮಕ್ಕಳು, ಶಿಕ್ಷಕರು ಶಾಲೆಗೆ ಬರಲಿದ್ದಾರೆ. ಸುಮಾರು ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಬಿಸಿಯೂಟ ಮತ್ತೆ ಆರಂಭವಾಗಲಿದೆ.