
ಶಾಲೆಗೆ ಶುಲ್ಕ ಕಟ್ಟಿಲ್ಲವೆಂದು ಮಕ್ಕಳನ್ನು ಕೂಡಿ ಹಾಕಿದ ಘಟನೆ ಕೊಪ್ಪಳದ ನಿವೇದಿತಾ ಶಾಲೆಯಲ್ಲಿ ನಡೆದಿದೆ. ಶಾಲಾ ಶುಲ್ಕ ಬಾಕಿ ಉಳಿಸಿಕೊಂಡಿದ್ದ ಮಕ್ಕಳನ್ನು ಮನೆಗೆ ಕಳುಹಿಸದೆ ಶಾಲೆಯ ಸಿಬ್ಬಂದಿ ಉಳಿಸಿಕೊಂಡಿದ್ದಾರೆ.
20ಕ್ಕೂ ಹೆಚ್ಚು ಮಕ್ಕಳನ್ನು ಈ ರೀತಿ ಶಾಲೆಯಲ್ಲಿ ಉಳಿಸಿಕೊಳ್ಳಲಾಗಿದೆ. ನಿವೇದಿತಾ ಶಾಲೆಯ ಮುಖ್ಯಸ್ಥರು ಈ ರೀತಿ ಮಾಡಿದ್ದಾರೆ. ಮಕ್ಕಳು ಮನೆಗೆ ಬಾರದಿದ್ದ ಕಾರಣ ಆತಂಕಗೊಂಡ ಪೋಷಕರು ಶಾಲೆಗೆ ಭೇಟಿ ನೀಡಿದಾಗ ಶುಲ್ಕ ಕಟ್ಟದಿರುವುದಕ್ಕೆ ಶಾಲೆಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.
ಈ ವೇಳೆ ಶಾಲಾ ಮುಖ್ಯಸ್ಥರ ಜೊತೆಗೆ ಪೋಷಕರ ಮಾತಿನ ಚಕಮಕಿ ನಡೆದಿದೆ. ಆನಂತರ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.
(ಸಾಂದರ್ಭಿಕ ಚಿತ್ರ)