ಬೆಂಗಳೂರು: ಶಾಲಾ ಮಕ್ಕಳ ಬೇಸಿಗೆ ರಜೆಯನ್ನು 14 ದಿನಗಳ ಕಾಲ ಕಡಿತ ಮಾಡಲಾಗಿದೆ. ಏಪ್ರಿಲ್ 1 ರಿಂದ ಮೇ 15 ರವರೆಗೆ ರಜೆ ಇರಲಿದ್ದು, ಮೇ 16 ರಿಂದ ಶಾಲೆಗಳು ಪುನರಾರಂಭವಾಗಲಿದೆ.
ಕೊರೋನಾ ಕಾರಣದಿಂದಾಗಿ ಕಲಿಕೆ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಬೇಗನೆ ಶಾಲೆಗಳನ್ನು ಆರಂಭ ಮಾಡಲಾಗುವುದು.
2022 -23 ನೇ ಶೈಕ್ಷಣಿಕ ವರ್ಷವನ್ನು ಮೇ 16 ರಿಂದ ಆರಂಭಿಸಲಾಗುವುದು. ಕಳೆದ 2 ವರ್ಷದಲ್ಲಿ ಮಕ್ಕಳಲ್ಲಿ ಕಲಿಕಾ ಕೊರತೆ ಉಂಟಾಗಿದ್ದು, ಇದನ್ನು ಕಲಿಕಾ ಚೇತರಿಕೆ ವಿಶೇಷ ಕಾರ್ಯಕ್ರಮದ ಮೂಲಕ ಸರಿದೂಗಿಸಲು ಬೇಸಿಗೆ ರಜೆ ಕಡಿತ ಮಾಡಿದ್ದು, ಮೇ 16 ರಿಂದ ಶಾಲೆಗಳನ್ನು ಆರಂಭಿಸಲಾಗುವುದು.