
ಹಾಸನ: ಹಾಸನ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ. ಹಾಸನ, ಆಲೂರು ತಾಲೂಕಿನ ಶಾಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಶಾಲೆಗಳಿಗೆ 3 ದಿನ ರಜೆ ನೀಡಲಾಗಿದೆ. 1 ರಿಂದ 9ನೇ ತರಗತಿಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.
ಹಾಸನದಲ್ಲಿ ಕೋವಿಡ್ ಸಭೆ ನಡೆಸಿದ ಸಚಿವರು ಮಾಹಿತಿ ನೀಡಿ, ಆಲೂರು ತಾಲೂಕಿನ 39 ಶಾಲೆಯಲ್ಲಿ 161 ಮಕ್ಕಳಿಗೆ, ಹಾಸನದ 29 ಶಾಲೆಯ 288 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಎರಡು ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.