
ಮಡಿಕೇರಿ: ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಕಟ್ಟೆಮಾಡು ದೇವಪ್ಪ ಬಲಿಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಮುಂಜಾಗ್ರತೆ ಕ್ರಮವಾಗಿ ಇಂದು ರಜೆ ಘೋಷಣೆ ಮಾಡಲಾಗಿದೆ.
ಸೋಮವಾರಪೇಟೆಯ ನೆಲ್ಲಿಹುದಿಕೇರಿ, ಅಭ್ಯತ್ ಮಂಗಲ, ಮಡಿಕೇರಿ ತಾಲೂಕಿನ ಹೊಸಕೇರಿ, ಮುರಗೋಡ, ಕಟ್ಟೆಮಾಡು, ಅರೆಕಾಡು, ಗುಯ್ಯ, ಸಿದ್ದಾಪುರದ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿ ಕೊಡಗು ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ನಿನ್ನೆ ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಕಟ್ಟೆಮಾಡು ದೇವಪ್ಪ ಬಲಿಯಾಗಿದ್ದರು. ಮಡಿಕೇರಿ ತಾಲೂಕಿನ ಅರೆಕಾಡು ಗ್ರಾಮದಲ್ಲಿ ಘಟನೆ ನಡೆದಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.