ಬೆಂಗಳೂರು: 2020 -21 ನೇ ಸಾಲಿನ ಖಾಸಗಿ ಶಾಲೆಗಳ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಪೂರ್ಣ ಶುಲ್ಕವನ್ನು ಪಡೆದುಕೊಂಡಿದ್ದರೆ ಹೆಚ್ಚುವರಿ ಶುಲ್ಕ ಪೋಷಕರಿಗೆ ವಾಪಸ್ ಕೊಡುವಂತೆ ಶಾಲೆಗಳಿಗೆ ಆದೇಶ ನೀಡಲಾಗಿದೆ.
ಶೇಕಡ 15 ರಷ್ಟು ಶುಲ್ಕ ಕಡಿತಕ್ಕೆ ಕೋರ್ಟ್ ಆದೇಶ ನೀಡಿದ್ದು, ಶೇಕಡ 30 ರಷ್ಟು ಶುಲ್ಕ ಕಡಿತಕ್ಕೆ ಸರ್ಕಾರ ಆದೇಶಿಸಿತ್ತು. ಖಾಸಗಿ ಶಾಲೆಗಳ ಒಕ್ಕೂಟದಿಂದ ಕೋರ್ಟ್ ಮೊರೆ ಹೋಗಿದ್ದು, ಬೋಧನಾ ಶುಲ್ಕದಲ್ಲಿ ಶೇಕಡ 15 ರಷ್ಟು ಶುಲ್ಕ ಪಡೆಯಲು ಆದೇಶ ನೀಡಲಾಗಿತ್ತು. ಹೈಕೋರ್ಟ್ ಆದೇಶದಂತೆ ಶುಲ್ಕ ಪಡೆಯಲು ಸರ್ಕಾರದಿಂದ ಅಧಿಕೃತವಾಗಿ 2020 -21 ನೇ ಸಾಲಿನ ಶುಲ್ಕ ಆದೇಶವನ್ನು ಪ್ರಕಟಿಸಲಾಗಿದೆ. ಹೆಚ್ಚುವರಿ ಶುಲ್ಕವನ್ನು ಖಾಸಗಿ ಶಾಲೆಗಳು ವಾಪಸ್ ನೀಡಬೇಕಿದೆ ಎಂದು ಹೇಳಲಾಗಿದೆ.