ಬಳ್ಳಾರಿ/ಹೊಸಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಬೋಧನಾ ಶುಲ್ಕದ ಅರ್ಧದಷ್ಟು ಶುಲ್ಕವನ್ನು ಮಾತ್ರ ಶಾಲಾ ಆಡಳಿತ ಮಂಡಳಿಯವರು ಪಾವತಿಸಿಕೊಳ್ಳಬೇಕೆಂದು ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ ತಿಳಿಸಿದ್ದಾರೆ.
ಕೋವಿಡ್-19 ಹಿನ್ನಲೆಯಲ್ಲಿ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಪರಿಷ್ಕೃತ ಮುಂದಿನ ಆದೇಶ ಬರುವವರೆಗೆ ವಾರ್ಷಿಕ ಬೋಧನಾ ಶುಲ್ಕದ ಅರ್ಧದಷ್ಟು ಮಾತ್ರ ಬೋಧನಾ ಶುಲ್ಕವನ್ನು ಪಡೆಯಲು ಆಡಳಿತ ಮಂಡಳಿಯವರಿಗೆ ಸೂಚಿಸಿದೆ.
ಅದರಂತೆ ಪಾಲಕರು ಮತ್ತು ಪೋಷಕರು ಶಾಲೆಯ ವಾರ್ಷಿಕ ಬೋಧನಾ ಶುಲ್ಕದ ಅರ್ಧದಷ್ಟು ಶುಲ್ಕವನ್ನು ಮಾತ್ರ ಪಾವತಿಸಲು ಸೂಚಿಸುತ್ತಾ, ಶಾಲಾ ಆಡಳಿತ ಮಂಡಳಿಯವರು ಹೆಚ್ಚುವರಿ ಶುಲ್ಕ ಕೋರಿದಲ್ಲಿ ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ ಇವರಿಗೆ ಲಿಖಿತವಾಗಿ ದೂರನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.