ಹಾಸನ: ನಟ ಡಾಲಿ ಧನಂಜಯ್ ಅವರ ಮದುವೆ ಫೆಬ್ರವರಿಯಲ್ಲಿ ನಡೆಯಲಿದ್ದು, ಈಗಾಗಲೇ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಕರೆಯತೊಡಗಿದ್ದಾರೆ.
ಹೀಗೆ ವಿವಾಹದ ಹೊಸ್ತಿಲಲ್ಲಿರುವ ನಟ ಡಾಲಿ ಧನಂಜಯ್ ತಮ್ಮ ಹುಟ್ಟೂರು ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಹಟ್ಟಿಯ ಸರ್ಕಾರಿ ಶಾಲೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದಾರೆ. ಈ ಶಾಲೆಯಲ್ಲಿ ಓದದೆ ಇದ್ದರೂ ತವರೂರಿನ ಮೇಲಿನ ಅಭಿಮಾನದಿಂದ ಶಾಲೆಗೆ ಕಾಯಕ ನೀಡಲು ಮುಂದಾಗಿದ್ದಾರೆ.
ಕಾಳೇನಹಳ್ಳಿಹಟ್ಟಿಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 80 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಕೊಠಡಿಗಳಿಗೆ ಟೈಲ್ಸ್, ಗೋಡೆಗಳಿಗೆ ಸುಣ್ಣಬಣ್ಣ, ಚುರಕಿ ಗಾರೆ ರಿಪೇರಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿ, ಶೌಚಾಲಯ ದುರಸ್ತಿ, ಅಡುಗೆ ಮನೆ ಸಹಿತ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಧನಂಜಯ್ ದೇಣಿಗೆ ನೀಡಿದ್ದಾರೆ.