
ಬೆಂಗಳೂರು: ಶಾಲಾ ಮಕ್ಕಳ ಖಾತೆಗೆ ಸೈಕಲ್, ಶೂ ಅನುದಾನ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇದು ಜಾರಿಯಾಗುವ ಸಾಧ್ಯತೆ ಇದೆ.
ಗುಣಮಟ್ಟದ ಬಗ್ಗೆ ಅಪಸ್ವರ ಹಿನ್ನೆಲೆಯಲ್ಲಿ ಮತ್ತು ಶಾಲೆ ಆರಂಭವಾದರೂ ಮಕ್ಕಳಿಗೆ ಶೂ, ಸೈಕಲ್ ವಿತರಣೆಯಾಗುವುದಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಶಾಲಾ ಮಕ್ಕಳ ಖಾತೆಗೆ ಸೈಕಲ್, ಶೂ, ಸಾಕ್ಸ್ ಅನುದಾನವನ್ನು ಜಮಾ ಮಾಡಲು ಚಿಂತನೆ ನಡೆಸಿದೆ.
ಶಾಲೆ ಮಕ್ಕಳಿಗೆ ಉಚಿತವಾಗಿ ಶೂ, ಸಾಕ್ಸ್ ವಿತರಿಸಲಾಗುತ್ತಿದೆ. ಎಂಟನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಯೋಜನೆ 2018 ರಿಂದ ಸ್ಥಗಿತಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪುನರಾರಂಭ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ವಿದ್ಯಾರ್ಥಿಗಳಿಗೆ ಸೈಕಲ್, ಶೂ, ಸಾಕ್ಸ್ ಖರೀದಿಗೆ ಆಗುವ ವೆಚ್ಚವನ್ನು ಆಯಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲು ಯೋಚಿಸಲಾಗಿದೆ ಎಂದು ಹೇಳಲಾಗಿದೆ.