
ಕಾರವಾರ: ವಿಷಕಾರಿ ಬೀಜ ಸೇವಿಸಿ 10ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಶಾಲೆಯ ಆವರಣದಲ್ಲಿ ಬೆಳೆದಿದ್ದ ವಿಷಕಾರಿ ಗಿಡದ ಬೀಜಗಳನ್ನು ಶೇಂಗಾ ಬೀಜ ಎಂದು ಭಾವಿಸಿದ ಮಕ್ಕಳು ತಿಂದಿದ್ದಾರೆ. ಬೀಜ ತಿಂದ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥ ಮಕ್ಕಳನ್ನು ಹಳಿಯಾಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.