21 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ಸೊಂದು ಹಾಡಾಗಲೇ ಹೊತ್ತಿ ಉರಿದಿರುವ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ. ಈ ಬಸ್ ರೋಹಿಣಿ ಏರಿಯಾದ ಬಾಲ ಭಾರತಿ ಪಬ್ಲಿಕ್ ಸ್ಕೂಲ್ ಗೆ ಸೇರಿದ್ದಾಗಿದೆ.
ವಿಷಯ ತಿಳಿದ ಕೂಡಲೇ ಮೂರು ಫೈರ್ ಇಂಜಿನ್ ಗಳು ಸ್ಥಳಕ್ಕೆ ಧಾವಿಸಿ ಯಶಸ್ವಿಯಾಗಿ ಬೆಂಕಿಯನ್ನು ನಂದಿಸಿವೆ.
ಬಸ್ ಗೆ ಬೆಂಕಿ ತಗುಲುತ್ತಿದ್ದಂತೆಯೇ ಚಾಲಕ ಹಾಗೂ ವಿದ್ಯಾರ್ಥಿಗಳು ಕೂಡಲೇ ಕೆಳಗಿಳಿದಿದ್ದು ಅಪಾಯದಿಂದ ಪಾಲಾಗಿದ್ದಾರೆ.