ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ವಾಹನಗಳ ಖರೀದಿಗೆ ಅನುಕೂಲವಾಗುವಂತೆ ಶಾಸಕರ ಪ್ರದೇಶ ಅಭಿವೃದ್ಧಿ ನಿಯಮಕ್ಕೆ ಸರ್ಕಾರ ತಿದ್ದುಪಡಿ ತಂದಿದೆ.
ಖಾಸಗಿ ಶಾಲೆಗಳು ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಸರ್ಕಾರಿ ಶಾಲೆಗಳಿಗೆ ಕೂಡ ಮಕ್ಕಳನ್ನು ಕರೆತರಲು ವಾಹನಗಳಿದ್ದರೆ ಅನುಕೂಲವಾಗುತ್ತದೆ. ಆದರೆ, ಶಾಸಕರ ನಿಧಿಯಲ್ಲಿ ವಾಹನ ಖರೀದಿಸಲು ಅವಕಾಶ ಇರಲಿಲ್ಲ. ಈಗ ನಿಯಮಕ್ಕೆ ತಿದ್ದುಪಡಿ ತರಲಾಗಿದೆ.
ಶಾಸಕರ ಪ್ರದೇಶ ಅಭಿವೃದ್ಧಿ ನಿಯಮಕ್ಕೆ ತಿದ್ದುಪಡಿ ತಂದಿದ್ದು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ವಾಹನ ಖರೀದಿಸಬಹುದು. ಚಾಲಕರ ವೇತನ, ಇಂಧನ ಮತ್ತು ದುರಸ್ತಿ ವೆಚ್ಚಗಳನ್ನು ಶಾಲಾ ಮೇಲುಸ್ತುವಾರಿ ಸಮಿತಿಗಳಲ್ಲಿ ಭರಿಸಬೇಕೆಂದು ಹೇಳಲಾಗಿದೆ.