alex Certify BREAKING NEWS: ಶಾಲಾ ವಾಹನ ಚಾಲಕರ ಡ್ರಂಕ್ & ಡ್ರೈವ್ ಕೇಸ್: 118 ಪ್ರಕರಣ ದಾಖಲು: ಚಾಲಕರ DL ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಶಾಲಾ ವಾಹನ ಚಾಲಕರ ಡ್ರಂಕ್ & ಡ್ರೈವ್ ಕೇಸ್: 118 ಪ್ರಕರಣ ದಾಖಲು: ಚಾಲಕರ DL ಸಸ್ಪೆಂಡ್

ಬೆಂಗಳೂರು: ಬೆಂಗಳೂರಿನಲ್ಲಿ ಶಾಲಾ ವಾಹನ ಚಾಲಕರ ಡ್ರಂಕ್ & ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಕೇವಲ 10 ತಿಂಗಳಲ್ಲಿ 118 ಚಾಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಡಿದ ಮತ್ತಿನಲ್ಲಿ ಶಾಲಾ ವಾಹನ ಚಲಾಯಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದೂ ಅಲ್ಲದೇ ಮಕ್ಕಳ ಜೀವಕ್ಕೂ ಅಪಾಯ ಎದುರಾಗಿದೆ. ಹಿನ್ನೆಲೆಯಲ್ಲಿ ಅಂತಹ ಶಾಲಾ ವಾಹನ ಚಾಲಕರ ಡ್ರೈವಿಂಗ್ ಲೈಸನ್ಸ್ ಸಸ್ಪೆಂಡ್ ಮಾಡಲಾಗಿದೆ.

ಕಳೆದ 10 ತಿಂಗಳಲ್ಲಿ ಕುಡಿದು ಶಾಲಾ ವಾಹನ ಚಾಲನೆ ಮಾಡಿದ 118 ಚಾಲಕರ ವಿರುದ್ಧ ಕೇಸ್ ದಾಖಲಾಗಿದೆ. 118 ಚಾಲಕರ ಲೈಸೆನ್ಸ್ ಕೂಡ ರದ್ದುಪಡಿಸಲಾಗಿದೆ.

ಜನವರಿಯಲ್ಲಿ 16 ಕೇಸ್, ಪೆಬ್ರವರಿಯಲ್ಲಿ 7 ಕೇಸ್, ಜುಲೈ ನಲ್ಲಿ 23, ಆಗಸ್ಟ್ ನಲ್ಲಿ 26, ಸೆಪ್ಟೆಂಬರ್ ನಲ್ಲಿ 22, ನವೆಂಬರ್ ನಲ್ಲಿ 24 ಕೇಸ್ ದಾಖಲಾಗಿದೆ. ಕಾಂಟ್ರ್ಯಾಕ್ಟ್ ಶಾಲಾ ವಾಹಾನ ಚಾಲಕರಿಂದಲೇ ಹೆಚ್ಚು ನಿಯಮ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...