
ಬೆಂಗಳೂರು: ಶಾಲಾ ವಾಹನ ಪಲ್ಟಿಯಾಗಿ ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಸಮೀಪ ನಡೆದಿದೆ.
ಪಾಲನ ಜೋಗಹಳ್ಳಿ ಸಮೀಪದ ಬಿ.ಹೆಚ್. ಪಬ್ಲಿಕ್ ಶಾಲೆಗೆ ಸೇರಿದ ವಾಹನ ಕೆರೆ ಏರಿ ಮೇಲಿಂದ ಪಲ್ಟಿಯಾಗಿದೆ.. ಓರ್ವ ವಿದ್ಯಾರ್ಥಿ ತಲೆಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬ ವಿದ್ಯಾರ್ಥಿಯ ಕಾಲಿಗೆ ಪೆಟ್ಟಾಗಿದೆ.. ಗಂಭೀರವಾಗಿ ಗಾಯಗೊಂಡ ಐವರು ಸೇರಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಗಮನಿಸಿದ ಸ್ಥಳೀಯರು ಧಾವಿಸಿ ಬಂದು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಲಾ ವಾಹನ ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.