ಅಮರಾವತಿ: ಖಾಸಗಿ ಶಾಲೆ ಶುಲ್ಕವನ್ನು ಶೇಕಡ 30 ರಷ್ಟು ಕಡಿತಗೊಳಿಸಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು 2020 -21ನೇ ಶೈಕ್ಷಣಿಕ ಸಾಲಿನಲ್ಲಿ ಶೇಕಡ 30 ರಷ್ಟು ಕಡಿತ ಮಾಡಬೇಕೆಂದು ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಶಾಲಾ ಶಿಕ್ಷಣ ಮೇಲ್ವಿಚಾರಣಾ ಆಯೋಗ ಈ ಬಗ್ಗೆ ಶಿಫಾರಸು ಮಾಡಿದ್ದು, ಇದರ ಅನ್ವಯ ಸರ್ಕಾರ ಆದೇಶಿಸಿದೆ. ಖಾಸಗಿ ಶಾಲೆಗಳ ಪ್ರವೇಶ ಶುಲ್ಕದಲ್ಲಿ ಶೇಕಡ 70 ರಷ್ಟು ಮಾತ್ರ ಪಡೆಯಬೇಕು. ಈಗಿನ ಆನ್ಲೈನ್ ಶಿಕ್ಷಣ ಚಟುವಟಿಕೆ ಮುಂದುವರೆಸಬೇಕೆಂದು ಹೇಳಲಾಗಿದೆ.