ಧಾರವಾಡ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ, ಗಣಿ, ಸಿನೆಮಾ, ಹಾಗೂ ಸುಣ್ಣದ ಕಲ್ಲು, ಡಾಲಮೈಟ್ ಗಣಿಗಳು, ಕಬ್ಬಿಣ ಕ್ರೋಮ್ ಮತ್ತು ಮ್ಯಾಂಗನೀಸ್ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ನೆರವಿಗೆ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.
ಒಂದರಿಂದ ಮೆಟ್ರಿಕ್‍ಪೂರ್ವ ತರಗತಿ ವಿದ್ಯಾರ್ಥಿಗಳು ಸೆಪ್ಟಂಬರ್ 30 ರೊಳಗೆ ಹಾಗೂ ಮೆಟ್ರಿಕ್ ನಂತರದ ತರಗತಿಗಳ ವಿದ್ಯಾರ್ಥಿಗಳು ಅಕ್ಟೋಬರ್ 31 ರವರೆಗೆ ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ ವೆಬ್‍ಸೈಟ್ https://scholarships.gov.in ಮೂಲಕ ಆನ್‍ಲೈನ್‍ನಲ್ಲಿ ಮಾತ್ರ ಸ್ವೀಕರಿಸಲಾಗುವುದು.
ತಾಂತ್ರಿಕ ನೆರವಿಗೆ helpdesk@nsp.gov.in ಅಥವಾ ಸಹಾಯವಾಣಿ ಸಂಖ್ಯೆ 0120-6619540 ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗೆ wclwoblr-ka@nic.in ಇಮೇಲ್ ಮಾಡಬಹುದು ಎಂದು ಕಾರ್ಮಿಕ ಸಚಿವಾಲಯದ ಧಾರವಾಡ ಡಿಸ್ಪೆನ್ಸರಿಯ ವೈದ್ಯಾಧಿಕಾರಿ ಕೋರಿದ್ದಾರೆ.