ಧಾರವಾಡ: 2020-21 ನೇ ಸಾಲಿಗೆ ರಾಷ್ಟೀಯ ವಿದ್ಯಾರ್ಥಿವೇತನ ಪೋರ್ಟಲ್(ಎನ್.ಎಸ್.ಪಿ) ಅನ್ವಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖ್, ಭೌದ್ದರು ಹಾಗೂ ಪಾರ್ಸಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಡಿಸೆಂಬರ್ 30 ರ ವರೆಗೆ ಅವಧಿ ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಯಾವುದಾದರೂ ಒಂದು ವಿದ್ಯಾರ್ಥಿವೇತನ ಯೋಜನೆಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ನ ವೆಬ್ಸೈಟ್ www.sochalarships.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ವೆಬ್ಸೈಟ್ಗೆ ಲಿಂಕ್ www.gokdom.kar.nic.in ಅಥವಾ www.dom.karnataka.gov.in ನಲ್ಲಿ ದೊರೆಯವುದು.
ಹೆಚ್ಚಿನ ವಿವರಗಳಿಗಾಗಿ ಧಾರವಾಡ ಜಿಲ್ಲಾ ಉರ್ದು ಇ.ಸಿ.ಓ, ತಾಲ್ಲೂಕಾ ಉರ್ದು ಸಿ.ಆರ್.ಪಿ ಇವರನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಮೆಟ್ರಿಕ್ ನಂತರದ ಮತ್ತು ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿವೇತನಕ್ಕಾಗಿ ಸಂಪರ್ಕಿಸಬಹುದು.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: ಧಾರವಾಡ ಮಾಹಿತಿ ಕೇಂದ್ರ- 9035972618, ಹುಬ್ಬಳ್ಳಿ ಮಾಹಿತಿ ಕೇಂದ್ರ- 88677718261, ಕಲಘಟಗಿ ಮಾಹಿತಿ ಕೇಂದ್ರ- 9538912399, ಕುಂದಗೋಳ ಮಾಹಿತಿ ಕೇಂದ್ರ- 8904661872, ನವಲಗುಂದ ಮಾಹಿತಿ ಕೇಂದ್ರ- 8746894524, ಜಿಲ್ಲಾ ಕಚೇರಿ ಸಂಖ್ಯೆ- 0836-2971590 ಸಂಪರ್ಕಿಸಹಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.